ಉಪ್ಪಳ: ಭಾರತೀಯ ಜನತಾ ಪಕ್ಷ ಮಂಗಲಪಾಡಿ ಪಂಚಾಯತ್ ವ್ಯಾಪ್ತಿಯ ಜವಾಬ್ದಾರಿಯುತ ಪ್ರಮುಖ ರ ಸಭೆಯು ಐಲ ಪಕ್ಷದ ಕಚೇರಿಯಲ್ಲಿ ನಡೆಯಿತು ,ಮುಂದಿನ ತ್ರಿಸ್ಥರ ಪಂಚಾಯತ್ ಚುನಾವಣೆಯ ದೃಷ್ಟಿಯಲ್ಲಿ ಹೊಸ ಮತದಾರರನ್ನು ಮತದಾರಪಟ್ಟಿಗೆ ಸೇರಿಸುವ ಪ್ರಕ್ರಿಯೆ ಬಗ್ಗೆ, ಪಂಚಾಯತಿ ವಾರ್ಡ್ ವಿಭಜನೆಯ ಬಗ್ಗೆ ಲೋಕಸಭಾ ಚುನಾವಣೆಯ ಕಾರ್ಯ ವೈಖರಿಯ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು , ಸಭೆಯ ಅಧ್ಯಕ್ಷತೆಯನ್ನು ದಕ್ಷಿಣ ವಲಯ ಅಧ್ಯಕ್ಷರಾದ ರಾಮಚಂದ್ರ ಬಳ್ಳಾಲ್ ವಹಿಸಿ ದ್ದರು,ಕುಂಬ್ಳೆ ಮಂಡಲ ಪ್ರದಾನ ಕಾರ್ಯದರ್ಶಿ ವಸಂತ ಮಯ್ಯ ಮಾಹಿತಿಯನ್ನು ನೀಡಿದರು,ಬಿಜೆಪಿ ಉತ್ತರಾವಲಯ ಅಧ್ಯಕ್ಷ ದಿನೇಶ್ ಮೂಲಿಂಜ ಜಿಲ್ಲಾ ಸಮಿತಿ ಸದಸ್ಯರಾದ ಬಾಬು ,ಪಂಚಾಯತ್ ಸದಸ್ಯರಾದ ಸುಧಾ ,ರೇವತಿ, ಕಿಶೋರ್ ಮತ್ತು ಪಕ್ಷದ ವಿವಿಧ ಜವಾಬ್ದಾರಿಯ ಪ್ರಮುಖರು ಸಭೆಯಲ್ಲಿ ಉಪಸ್ಥಿತರಿದ್ದರು ಅನಿಲ್ ಐಲ ಸ್ವಾಗತಿಸಿ ರಂಜಿತ್ ಶಾರದ ನಗರ ವಂದಿಸಿದರು