ಮೀಯಪದವು ಶಾಲೆಯಲ್ಲಿ ಡಾ.ನಾ. ಮೊಗಸಾಲೆ ಪೌರಾಭಿನಂದನೆ ಹಾಗೂ ಸಾಹಿತ್ಯಸಮೀಕ್ಷೆ ಅಗಸ್ಟ್ ೧೦ರಂದು

Share with


ಮoಜೇಶ್ವರ: ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಕಾಸರಗೋಡು, ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ  ಸಂಘ, ಶಂಪಾ ಪ್ರತಿಷ್ಟಾನ ಬೆಂಗಳೂರು, ವಿಕಾಸ ಮೀಯಪದವು ಇವರ ಸಂಯುಕ್ತ ಆಶ್ರಯದಲ್ಲಿ ಡಾ.ನಾ. ಮೊಗಸಾಲೆ ಪೌರಾಭಿನಂದನೆ ಹಾಗೂ ಸಾಹಿತ್ಯಸಮೀಕ್ಷೆ ಕಾರ್ಯಕ್ರಮ ೧೦-೮-೨೦೨೪ ರಂದು ಬೆಳಿಗ್ಗೆ ೧೦ರಿಂದ ಸಂಜೆ ೫ರ ತನಕ ಮೀಯಪದವು ಶ್ರೀ ವಿದ್ಯಾವರ್ಧಕ ಉನ್ನತ ಪ್ರೌಢ ಶಾಲೆಯ ನಾರಾಯಣೀಯಂ ರಂಗಮoದಿರದಲ್ಲಿ ನಡೆಯಲಿದೆ. ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಇದರ ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಶಿ ಉದ್ಘಾಟಿಸುವರು. ಹಲವಾರು ಗಣ್ಯರು ಭಾಗವಹಿಸುವರು.


Share with

Leave a Reply

Your email address will not be published. Required fields are marked *