
ಕರ್ನಾಟಕದ ಸಾರಿಗೆ ಬಸ್‌ಗಳ ಮೇಲೆ MES ಪುಂಡಾಟ ಕರ್ನಾಟಕದ ಸಾರಿಗೆ ವೋಲ್ವೇ ಬಸ್ ಅಂಬಾರಿ ಪುಣೆಯಿಂದ ಪ್ರಯಾಣಿಕರನ್ನ ಹೊತ್ತು ಬೆಳಗಾವಿಗೆ ಬರ್ತಿತ್ತು. ಈ ವೇಳೆ ಬಸ್‌ನ ಅಡ್ಡಗಟ್ಟಿ ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ಕಾರ್ಯಕರ್ತರು ಪುಂಡಾಟ ಮೆರೆದಿದ್ದಾರೆ. ಮರಾಠಿ ಭಾಷೆಯಲ್ಲಿ ಬಸ್ ಮೇಲೆ ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಎಂದು ಮರಾಠಿಯಲ್ಲಿ ಬರೆದು ಉದ್ಧಟತನ ತೋರಿದ್ದಾರೆ. ಇದಷ್ಟೇ ಅಲ್ಲ. ಕನ್ನಡ ಬೋರ್ಡ್‌ಗೂ ಕಪ್ಪು ಮಸಿ ಬಳಿದು ಎಂಇಎಸ್ ಕಪಿಗಳು ಕುಚೇಷ್ಟೆ ತೋರಿದ್ದಾರೆ.

ಕೊಲ್ಲಾಪುರದಿಂದ ಕರ್ನಾಟಕಕ್ಕೆ ಹೋಗುವ ಬಸ್ ಸಂಚಾರ ಬಂದ್
ಮಹಾರಾಷ್ಟ್ರದಲ್ಲಿ ಕೊಲ್ಲಾಪುರದಿಂದ ಕರ್ನಾಟಕಕ್ಕೆ ಹೋಗುವ ಎಲ್ಲಾ ಬಸ್‌ಗಳನ್ನು ಸಂಚಾರವನ್ನು ಬಂದ್ ಮಾಡಲಾಗಿದೆ. ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್ ಅನಿರ್ದಿಷ್ಟಾವಧಿಗೆ ಬಸ್ ಸೇವೆಗಳನ್ನು ಸ್ಥಗಿತಗೊಳಿಸಲು ನಿರ್ದೇಶನ ನೀಡಿದ್ದಾರೆ.
ಬೆಳಗಾವಿಯ ಹೊರವಲಯದಲ್ಲಿ ಮರಾಠಿ ಭಾಷೆಯಲ್ಲಿ ಮಾತನಾಡಲಿಲ್ಲವೆಂದು KSRTC ಬಸ್ ಕಂಡಕ್ಟರ್ ಮೇಲೆ ಮರಾಠಿ ಪುಂಡರು ಹಲ್ಲೆ ನಡೆಸಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಹಿನ್ನೆಲೆಯಲ್ಲಿ ಬಸ್ ಸಂಚಾರವನ್ನು ಮಹಾರಾಷ್ಟ್ರ ಸರ್ಕಾರ ಸ್ಥಗಿತಗೊಳಿಸಿದೆ.