2ನೇ ದಿನವೂ ಮಹಾರಾಷ್ಟ್ರ-ಕರ್ನಾಟಕ ಬಸ್ ಸೇವೆಗಳು ಸ್ಥಗಿತ

Share with

ಕರ್ನಾಟಕ -ಮಹಾರಾಷ್ಟ್ರ ನಡುವಿನ ಅಂತರರಾಜ್ಯ ಬಸ್‌ ಸೇವೆಗಳು ಸತತ 2ನೇ ದಿನವೂ ಸ್ಥಗಿತಗೊಂಡಿವೆ.

ಗಡಿ ಜಿಲ್ಲೆಯಾದ ಬೆಳಗಾವಿಯಲ್ಲಿ ಭಾಷೆಯ ವಿವಾದದ ಕುರಿತು ಪ್ರತಿಭಟನೆ ಮುಂದುವರಿದ ಕಾರಣ ಕರ್ನಾಟಕ -ಮಹಾರಾಷ್ಟ್ರ ನಡುವಿನ ಅಂತರರಾಜ್ಯ ಬಸ್ ಸೇವೆಗಳು ಭಾನುವಾರ ತಡರಾತ್ರಿಯವರೆಗೂ ಸ್ಥಗಿತಗೊಂಡಿವೆ.

ಶಿವಸೇನೆ (ಯುಬಿಟಿ) ಕಾರ್ಯಕರ್ತರು ಭಾನುವಾರ ಪುಣೆಯಲ್ಲಿ ಕರ್ನಾಟಕದ ನಂಬ‌ರ್ ಪ್ಲೇಟ್‌ಗಳನ್ನು ಹೊಂದಿರುವ ಬಸ್‌ಗಳನ್ನು ವಿರೂಪಗೊಳಿಸಿದ್ದಾರೆ. ಇದಕ್ಕೆ ಕನ್ನಡಿಗರು ಆಕ್ರೋಶ ಹೊರಹಾಕಿದ್ದಾರೆ.


Share with