ತುಮಕೂರು : ಶಿರಾ ತಾಲ್ಲೂಕಿನ ತಾವರೇಕೆರೆ ಗ್ರಾಮದ ಶ್ರೀ ಸಿದ್ದಾರ್ಥ ಪದವಿ ಪೂರ್ವ ಕಾಲೇಜಿನಲ್ಲಿ ಹಳೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸೇರಿ ಬಿಸಿಯೂಟ
ಸೇವಾ ಕಾರ್ಯವನ್ನು ಬುಧವಾರದಂದು ಅನುಷ್ಠಾನಗೊಳಿಸಿದರು.
ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಣಾ ಅಧಿಕಾರಿ ಹರೀಶ್ ಮಾತಾನಾಡಿ ಮಕ್ಕಳು ಆಲೋಚನೆಗಳನ್ನು ಮಾಡಬೇಕು, ಆಲೋಚನೆಗಳಿಗೆ ಜಗತ್ತನ್ನು ಬದಲಿಸುವ ಶಕ್ತಿ ಇರುತ್ತದೆ, ಕಾಲೇಜು ಮಕ್ಕಳಿಗೆ ಬಿಸಿಯೂಟ ನೀಡುತ್ತಿರುವುದು ನಿಜಕ್ಕೂ ಒಳ್ಳೆಯ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗರಾಜು ಮಾತಾನಾಡಿ ಇದು ಬಹಳ ಒಳ್ಳೆಯ ಪರಿಕಲ್ಪನೆ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕಾಲೇಜಿಗೆ ಬರುತ್ತಿರುವುದರಿಂದ ಈ ಯೋಜನೆಯೂ ಮಕ್ಕಳಿಗೆ ಸಹಾಯಕವಾಗುತ್ತದೆ ಎಂದರು.
ಸಿದ್ದಾರ್ಥ ಪದವಿ ಪೂರ್ವ ಕಾಲೇಜಿನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಶಿವಕುಮಾರ್ ನಾಯಕ್ ಮಾತಾನಾಡಿ ಈ ವ್ಯವಸ್ಥೆಯನ್ನು ನಿಮ್ಮ ಪ್ರಗತಿಗಾಗಿ ಮಾಡುತ್ತಿದ್ದೇವೆ, ಇದರ ಸದುಪಯೋಗ ಮಾಡಿಕೊಂಡು ಕಾಲೇಜಿಗೆ ಒಳ್ಳೆಯ ಕೀರ್ತಿ ತರುವುದು ನಿಮ್ಮ ಜವಾಬ್ದಾರಿ ಎಂದರು.
ಕಾರ್ಯಕ್ರಮದಲ್ಲಿ ತಾವರೇಕೆರೆ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕ ಚಂದ್ರಶೇಖರ್, ನಿವೃತ್ತ ಪ್ರಾಂಶುಪಾಲ ದೇವರಾಜ, ಬಲರಾಮ, ಶಿವು ಸ್ನೇಹಪ್ರಿಯ, ರವಿತೇಜ ಚಿಗಳಿಕಟ್ಟೆ ಹಾಗೂ ಕಾಲೇಜಿನ ಸಿಬ್ಬಂದಿಗಳು ಉಪಸ್ಥಿತರಿದ್ದರು.