ನಾಪತ್ತೆಯಾಗಿದ್ದ ವಿದ್ಯಾರ್ಥಿ ದಿಗಂತ್‌ ಕೊನೆಗೂ ಪತ್ತೆ!

Share with

ಬಂಟ್ವಾಳ: ನಿಗೂಢ ರೀತಿಯಲ್ಲಿ ನಾಪತ್ತೆಯಾಗಿರುವ ಫರಂಗಿಪೇಟೆಯ ಕಿದೆಬೆಟ್ಟು ವಿದ್ಯಾರ್ಥಿ ದಿಗಂತ್‌ ಮಾ.8 ರ ಶನಿವಾರ ಉಡುಪಿಯಲ್ಲಿ ಪತ್ತೆಯಾಗಿದ್ದಾನೆ.

ಪೊಲೀಸರು ಆತನನ್ನು ಬಂಟ್ವಾಳಕ್ಕೆ ಕರೆತರುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಫೆ.25 ರ ಮಂಗಳವಾರ ಸಂಜೆ ದೇವಸ್ಥಾನಕ್ಕೆ ಹೋಗುವುದೆಂದು ಮನೆಯಲ್ಲಿ ಹೇಳಿದ ವಿದ್ಯಾರ್ಥಿ ಅನಂತರ ದೇವಸ್ಥಾನಕ್ಕೆ ಹೋಗದೇ, ಇತ್ತ ಮನೆಗೂ ಮರಳದೆ ನಾಪತ್ತೆಯಾಗಿದ್ದ. ಅಲ್ಲದೇ ಆತನ ಚಪ್ಪಲಿಗಳು ಹಾಗೂ ಮೊಬೈಲ್‌ ಫೋನ್‌ ಮನೆಯ ಸಮೀಪದ ರೈಲ್ವೇ ಹಳಿಯಲ್ಲಿ ಪತ್ತೆಯಾಗಿತ್ತು.


Share with

Leave a Reply

Your email address will not be published. Required fields are marked *