ರಸ್ತೆ ಪರಿಶೀಲನೆ ಮಾಡಿದ ಶಾಸಕರು ರಸ್ತೆ ಸಮಸ್ಯೆ ಪರಿಹಾರಕ್ಕೆ ತಕ್ಷಣ ಸ್ಪಂದನೆ.

Share with

ಆಲೂರು: ತಾಲ್ಲೂಕಿನ ಬಿಕ್ಕೋಡಿನ ರಸ್ತೆಯ ಕಾಮತಿ ಗ್ರಾಮದ ಸರ್ಕಾರದ ನಿರ್ಲಕ್ಷಕ್ಕೆ ರಸ್ತೆಯ ಅವ್ಯವಸ್ಥೆ ಕಂಡು ಎತ್ತಿನ ಹೊಳೆ ಅಧಿಕಾರಿಗಳಿಗೆ ಗ್ರಾಮಸ್ಥರು ಛೀಮಾರಿ ಹಾಕಿರುವ ಘಟನೆ ಕಂಡು ಬಂದಿದ್ದು,ರಸ್ತೆಯಲ್ಲಿ ಭತ್ತದ ನಾಟಿ ಮಾಡುವ ಮೂಲಕ ಪ್ರತಿಭಟನೆ ಮಾಡಿದ್ದರು.ಈ ಸೂಕ್ಷ್ಮ ವಿಚಾರವನ್ನು ಶಾಸಕರು ಮಾಧ್ಯಮಗಳ ಮೂಲಕ   ಮನಗಂಡು  ಕಾಮತಿ ಗ್ರಾಮದ ರಸ್ತೆಗೆ ತೆರಳಿ ಎತ್ತಿನಹೊಳೆ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ರಸ್ತೆ ಸರಿಪಡಿಸಲು ಹೇಳಿ ತಾತ್ಕಾಲಿಕ ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದು ಸ್ಥಳಿಯರು ನಿಟ್ಟುಸಿರು ಬಿಟ್ಟಿದ್ದಾರೆ.

ಆಲೂರು ಕಟ್ಟಾಯ ಸಕಲೇಶಪುರ ಶಾಸಕರಾದ ಸಿಮೆಂಟ್ ಮಂಜು ಅವರು ಮಾತನಾಡಿ,

ಕುಡಿಯುವ ನೀರಿನ ಎತ್ತಿನಹೊಳೆ ಮಹತ್ತರ ಯೋಜನೆ ಕೋಟಿ ಕೋಟಿ ರೂ. ಹಣ ನೀರಲ್ಲಿ ಹೋಮವಾಗಿದೆ ಹಾಗೂ ಕೆಸರು ಗದ್ದೆಯಾದ ರಸ್ತೆಯಲ್ಲಿ ಸಂಚರಿಸಲು ವಾಹನ ಸವಾರರು ಪರದಾಡುವ ಪರಿಸ್ಥಿತಿ ಎದುರಾಗಿದೆ ಅದಲ್ಲದೆ ಎತ್ತಿನಹೊಳೆ ಯೋಜನೆ ಕಾಮಗಾರಿ ಹೇಳೋರಿಲ್ಲ ಕೇಳೋರಿಲ್ಲ ಅಧಿಕಾರಿಗಳು ಆಡಿದ್ದೇ ಆಟವಾಗಿದೆ,ರಸ್ತೆಯಲ್ಲಿ ಸಂಚಾರಿಸಲಾಗದೆ ಪರದಾಡುವ ಪರಿಸ್ಥಿತಿ ಎದುರಾಗಿದೆ,


ಅದಲ್ಲದೆ ಈ ಕಾಮಗಾರಿಯಲ್ಲಿ  ತಡೆಗೋಡೆ ಇಲ್ಲದೆ ಅಪಾಯಕ್ಕೆ ಆಹ್ವಾನ ನೀಡುತ್ತಿದೆ ಎತ್ತಿನಹೊಳೆ ಯೋಜನೆಯ ಮುಖ್ಯ ರಸ್ತೆ ಕೆಸರುಗದ್ದೆಯಂತಾಗಿದ್ದು ಓಡಾಡುತ್ತಿರುವ ಸ್ಥಳೀಯ ಗ್ರಾಮಸ್ಥರ ಸ್ಥಿತಿ ಶೋಚನೀಯ ಪರಿಸ್ಥಿತಿ ಎದುರಾಗಿದೆ ಅಲ್ಲದೆ ರಸ್ತೆಯಲ್ಲಿ ಬೈಕ್ ಸವಾರರು ಬಿದ್ದು  ಕೈಕಾಲು ಮುರಿದುಕೊಂಡಿದ್ದು ಅವರ ಪರಿಸ್ಥಿತಿ ಕೇಳುವವರಿಲ್ಲದೆ ಹಿಡಿಶಾಪ ಹಾಕುತಿದ್ದಾರೆ ಎಂದರು.

ಈ ಸಂಧರ್ಭದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಮುಖಂಡರುಗಳು ಸ್ಥಳದಲ್ಲಿದ್ದರು.


Share with

Tags:

Leave a Reply

Your email address will not be published. Required fields are marked *