ಲೋಕಸಭೆ ಚುನಾವಣೆಯಲ್ಲಿ BJP ಏಕಾಂಗಿಯಾಗಿ ಮ್ಯಾಜಿಕ್ ನಂಬರ್ ರೀಚ್ ಆಗದ ಕಾರಣ ಮುಂದಿನ ಸರ್ಕಾರದ ಬಗ್ಗೆ ತೀವ್ರ ಕುತೂಹಲ ಉಂಟಾಗಿದೆ. ಇದರ ಬೆನ್ನಲ್ಲಿಯೇ ಪ್ರಧಾನಿ ಮೋದಿ TDP ನಾಯಕ, ಆಂಧ್ರ ಮಾಜಿ CM ಚಂದ್ರಬಾಬು ನಾಯ್ಡುಗೆ ಕರೆ ಮಾಡಿ ಮಾತನಾಡಿದ್ದಾರೆ. ಈ ವೇಳೆ ತಾವು NDA ಭಾಗವಾಗಿಯೇ ಇರುವುದಾಗಿ ಅವರು ತಿಳಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. TDP ಜೊತೆ ಮಾತುಕತೆಗೆ ಕಾಂಗ್ರೆಸ್ ಸಹ ಮುಂದಾಗಿದೆ ಎಂಬ ವರದಿ ಹಿನ್ನೆಲೆಯಲ್ಲಿ ನಾಯ್ಡು ನಡೆ ನಿರ್ಣಾಯಕವಾಗಿದೆ.