ಅಲ್ಲಿಪಾದೆ: ಬಂಟ್ವಾಳದ ಅಲ್ಲಿಪಾದೆ ಸಂತ ಅಂತೋನಿಯವರ ಚರ್ಚ್’ನಲ್ಲಿ ಮೋಂತಿ ಫೆಸ್ಟ್ ಅನ್ನು ಭಾನುವಾರ ಸಂಭ್ರಮದಿಂದ ಆಚರಿಸಲಾಯಿತು.
ಪ್ರಧಾನ ಧರ್ಮಗುರುಗಳಾಗಿ ವಂ. ರೊಕ್ವಿನ್ ಪಿಂಟೋ ಬಲಿಪೂಜೆ ನೆರವೇರಿಸಿದರು.
ಸಹಧರ್ಮಗುರುಗಳಾದ ವಂ. ಅನುಷ್ ಡಿ ಕುನ್ಹಾ, ವಂ. ತಿಸ್ವನ್ ಲೋಬೊ, ವಂ. ಕೆನೆಟ್ ಕ್ರಾಸ್ತಾ ಉಪಸ್ಥಿತರಿದ್ದರು.
ಬಲಿಪೂಜೆಯ ಮೊದಲು ಅಲ್ಲಿಪಾದೆ ಪೇಟೆಯಲ್ಲಿ ಭವ್ಯ ಮೆರವಣಿಗೆ ನಡೆಯಿತು. ಈ ಮೆರವಣಿಗೆಯುದ್ದಕ್ಕೂ ಮೇರಿ ಮಾತೆಗೆ ಪುಟಾಣಿಗಳು ಪುಷ್ಪಾರ್ಚನೆ ನೆರವೇರಿಸಿದರು.
ಹಬ್ಬದ ದಿನದ ಪ್ರಯುಕ್ತ ನೂತನ ವೆಬ್’ಸೈಟನ್ನು ಅನಾವರಣಗೊಳಿಸಲಾಯಿತು.
ಅಲ್ಲಿಪಾದೆ ಚರ್ಚ್’ಗೆ ಸಂಬಂಧಪಟ್ಟ ಎಲ್ಲಾ ಕ್ರಿಶ್ಚಿಯನ್ ಕುಟುಂಬಗಳಿಗೆ ಹೊಸ ತೆನೆಯನ್ನು ವಿತರಿಸಲಾಯಿತು.
ಮೋಂತಿ ಹಬ್ಬದ ಪ್ರಯುಕ್ತ ಆಗಮಿಸಿದ ಎಲ್ಲರಿಗೂ ಸಿಹಿ ಹಾಗೂ ಕಬ್ಬನ್ನು ನೀಡಲಾಯಿತು.
ಈ ಎಲ್ಲಾ ಕಾರ್ಯಕ್ರಮಗಳ ನೇತೃತ್ವವನ್ನು ಚರ್ಚ್’ನ ಧರ್ಮಗುರುಗಳಾದ ವಂ. ರೋಬಾರ್ಟ್ ಡಿಸೋಜಾ ವಹಿಸಿದ್ದರು.
ಚರ್ಚ್’ನ ಹಿರಿಯರು ಸಹಕರಿಸಿದರು.