ಉಡುಪಿ: ಧವಳತ್ರಯ ಜೈನ ಕಾಶಿ ಟ್ರಸ್ಟ್, ಮೂಡುಬಿದಿರೆ ಮತ್ತು ಪ್ರಾಚ್ಯ ಸಂಶೋಧನ ಕೇಂದ್ರ ಉಡುಪಿ ಇವರ ಸಹಯೋಗದಲ್ಲಿ ಪ್ರಾಚೀನ ತಾಡೋಲೆ, ಶಾಸನ-ತಾಮ್ರಪತ್ರ, ಕ್ರೈಫಿಯತ್-ಹಸ್ತಪ್ರತಿ ಸಂರಕ್ಷಣೆ ಎಂಬ ಒಂದು ದಿನದ ಕಾರ್ಯಾಗಾರವನ್ನು ಇದೇ ಜೂನ್ 22ರಂದು ಮೂಡುಬಿದಿರೆಯ ರಮಾ ರಾಣಿ ಶೋಧ ಸಂಸ್ಥಾನ ಶ್ರೀ ಜೈನ ಮಠದಲ್ಲಿ ಆಯೋಜಿಸಲಾಗಿದೆ ಎಂದು ಪ್ರಾಚ್ಯ ಸಂಶೋಧನ ಕೇಂದ್ರದ ನಿರ್ದೇಶಕ ಪ್ರೊ. ಎಸ್.ಎ. ಕೃಷ್ಣಯ್ಯ ಹೇಳಿದರು.
ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 9.30ರಿಂದ ಸಂಜೆ 4 ಗಂಟೆಯವರೆಗೆ ಕಾರ್ಯಾಗಾರ ನಡೆಯಲಿದೆ. ಕಾರ್ಯಾಗಾರವನ್ನು ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಸ್ವಾಮೀಜಿ ಉದ್ಘಾಟಿಸಲಿದ್ದಾರೆ ಎಂದರು.
ಇತಿಹಾಸಕಾರ ಡಾ. ಉಮಾನಾಥ ಶೆಣೈ, ಉಪನ್ಯಾಸಕ ತೃತೇಶ ಆಚಾರ್ಯ,ನಿವೃತ್ತ ಚಿತ್ರಕಲಾ ಉಪನ್ಯಾಸಕ ರಾಘವೇಂದ್ರ ಅಮೀನ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರೊ. ಯು.ಸಿ. ನಿರಂಜನ, ಗಣೇಶ್ ರಾಜ್ ಸರಳೇಬೆಟ್ಟು ಇದ್ದರು.