ಮೂಡುಬಿದಿರೆ: ಬೈಕ್ ಕಳವು ಪ್ರಕರಣದ ಇಬ್ಬರು ಆರೋಪಿಗಳನ್ನು ಮೂಡುಬಿದಿರೆ ಪೊಲೀಸರು ಮಾರ್ಪಾಡಿ ಗ್ರಾಮದ ಸಾವಿರ ಕಂಬದ ಬಸದಿಯ ಬಳಿ ಬಂಧಿಸಿ ಬೈಕನ್ನ ವಶಪಡಿಸಿಕೊಂಡಿದ್ದಾರೆ.
ಮೂಡುಬಿದಿರೆ ತಾಲೂಕಿನ ಇಡಾ ಕೋಟೆಬಾಗಿಲು ನಿವಾಸಿ ಸೈಯದ್ ಜಾಕೀರ್ (20) ಮತ್ತು ಕೋಟೆಬಾಗಿಲು ಗ್ರಾಮದ ದರ್ಗಾ ರಸ್ತೆ ನಿವಾಸಿ ಮೊಹಮ್ಮದ್ ಶಹೀಂ (24) ಬಂಧಿತ ಆರೋಪಿಗಳು.
ಆರೋಪಿಗಳು ಅವರ ಬಳಿಯಿದ್ದ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕನ್ನು ಕಳ್ಳತನ ಮಾಡಲಾಗಿದೆ ಎಂದು ಬಾಯಿಬಿಟ್ಟಿದ್ದಾರೆ. ಜೈನಪೇಟೆಯ ಬಡಗ ಬಸದಿಯ ಎದುರು ಇರುವ ದೇವಿ ಕೃಪಾ ಅಪಾರ್ಟ್‌ಮೆಂಟ್‌ನ ಪಾರ್ಕಿಂಗ್ ಪ್ರದೇಶದಿಂದ ಕಳ್ಳತನ ಮಾಡಿದ್ದರು. ಮಾರ್ಪಾಡಿ ಗ್ರಾಮದಲ್ಲಿರುವ ಎವರ್‌ಪ್ರೈಸ್ ರೆಸಿಡೆನ್ಸ್ ಅಪಾರ್ಟ್‌ಮೆಂಟ್‌ನ ಪಾರ್ಕಿಂಗ್ ಸ್ಥಳದಿಂದ ಇನ್ನೊಂದು ಬೈಕ್ ಕದ್ದಿದ್ದರು. ಈ ಬೈಕನ್ನು ಪೇಪರ್ ಮಿಲ್ ಬಳಿಯ ಕೀರ್ತಿನಗರ ಕ್ರಾಸ್‌ನಲ್ಲಿ ಪೊದೆಗಳಲ್ಲಿ ಬಚ್ಚಿಟ್ಟಿರುವುದಾಗಿ ಆರೋಪಿಗಳು ತಿಳಿಸಿದ್ದು, ಪೊಲೀಸರು ಆ ಬೈಕನ್ನೂ ವಶಪಡಿಸಿಕೊಂಡಿದ್ದಾರೆ. ಎರಡು ಬೈಕ್‌ಗಳ ಒಟ್ಟು ಮೌಲ್ಯ 3 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.