ನಿವೃತ್ತ ನರ್ಸ್ ಯಡವಟ್ಟಿನಿಂದ ತಾಯಿ-ಮಗು ಮೃತಪಟ್ಟಿದ್ದಾರೆ. ಈ ಘಟನೆ ಕಲಬುರಗಿಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ನಡೆದಿದೆ. ಇಂಗಳಗಿ ಗ್ರಾಮದ ನಿವಾಸಿ ಶ್ರೀದೇವಿ ಪ್ರಭಾನೂರ್ (28) & ನವಜಾತ ಶಿಶು ಮೃತಪಟ್ಟಿದೆ. ನಿವೃತ್ತ ಆರೋಗ್ಯ ಸಹಾಯಕಿ ಗಂಗೂಬಾಯಿಯ ಬಳಿ ಹೆರಿಗೆಗೆ ದಾಖಲಾಗಿದ್ದ ಶ್ರೀದೇವಿ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ. ನಿವೃತ್ತ ನರ್ಸ್ ಯಡವಟ್ಟಿನಿಂದಲೇ ತಾಯಿ-ಮಗು ಮೃತಪಟ್ಟಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.