ಶ್ರೀ ಕ್ಷೇ. ಧ. ಗ್ರಾ.ಯೋಜನೆ ವತಿಯಿಂದ ಮಕ್ಕಳಿಗೆ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

Share with

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿರುದ್ಧಿ ಯೋಜನೆಯ ವತಿಯಿಂದ ಜನಜಾಗೃತಿ ವೇದಿಕೆ ಬಂಟ್ವಾಳ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸೈಂಟ್ ಜಾನ್ಸ್ ಪ್ರೌಢಶಾಲೆ, ಅಲ್ಲಿಪಾದೆ ಪ್ರೌಢಶಾಲಾ ಮಕ್ಕಳಿಗೆ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸಭೆಯ ಅಧ್ಯಕ್ಷ ಸ್ಥಾನವನ್ನು ಶಾಲಾ ಸಂಚಾಲಕರಾದ ನಸೀಸಾ ಸಿಸ್ಟರ್ ರವರು ವಹಿಸಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಕೆಟ್ಟ ಚಟಗಳಿಗೆ ಬಲಿಯಾಗದಂತೆ ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾಮ ಪಂಚಾಯತಿ ಸದಸ್ಯರಾದ ವಿನ್ಸೆಂಟ್ ಪಿಂಟೋ ರವರು ನೆರವೇರಿಸಿ ಯೋಜನೆಯಿಂದ ಉತ್ತಮ ರೀತಿಯಲ್ಲಿ ಕಾರ್ಯಕ್ರಮಗಳು ನಡೆಯುತ್ತಿದ್ದು ಇವತ್ತಿನ ಈ ಮಾಹಿತಿ ಕಾರ್ಯಕ್ರಮದ ಮಾಹಿತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ತಿಳಿಸಿದರು. ಜನಜಾಗೃತಿ  ಸಂಪನ್ಮೂಲ ವ್ಯಕ್ತಿ  ಜಯರಾಮ ಪೂಜಾರಿ  ಮಾತನಾಡಿ ಮದ್ಯಪಾನ ಧೂಮಪಾನ ಮತ್ತು ಮೊಬೈಲ್ ಬಳಕೆಯಿಂದ ಆರೋಗ್ಯದ ಮೇಲೆ, ಸಾಮಾಜಿಕವಾಗಿ ಆರ್ಥಿಕವಾಗಿ ಕೌಟುಂಬಿಕವಾಗಿ  ಆಗುವ ಕೆಟ್ಟ ಪರಿಣಾಮಗಳ ಬಗ್ಗೆ ತಿಳಿಸಿದರು. ನಮ್ಮ ಜೀವನಕ್ಕೆ ನಾವೇ ವಾಚ್ ಮ್ಯಾನ್ ಗಳಾಗಬೇಕು, ಕೆಟ್ಟದಾರಿಗೆ ಹೋಗದಂತೆ ಜಾಗೃತಿ ವಹಿಸಬೇಕು ಎಂದು ತಿಳಿಸಿದರು ಓದು, ಸಂಗೀತ, ಕ್ರೀಡೆ ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳುವಂತೆ ಮಾರ್ಗದರ್ಶನ ನೀಡಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರಾದ ದೀಪಾ ಸಿಸ್ಟರ್ ಮಕ್ಕಳ ಡ್ರೆಗ್ಸ್, ದುಶ್ಚಚಟಗಳಿಗೆ ಬಲಿಯಾಗದಂತೆ ದೂರ ಇರುವಂತೆ ಮಾಹಿತಿ ನೀಡಿದರು. ಒಕ್ಕೂಟದ ಅಧ್ಯಕ್ಷರಾದ ನವೀನ್ ಶೆಟ್ಟಿ  ಉಪಸ್ಥಿತರಿದ್ದರು.  ಕಾರ್ಯಕ್ರಮದಲ್ಲಿ ಬಂದಂತಹ ಎಲ್ಲರನ್ನು  ಸೇವಾ ಪ್ರತಿನಿಧಿ ವಸಂತಿ ಸ್ವಾಗತ ನೀಡಿದರು.  ಶಾಲಾ  ಶಿಕ್ಷಕರಾದ ರೊನಾಲ್ಡ್  ಧನ್ಯವಾದ ನೀಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಮೇಲ್ವಿಚಾರಕಿ ರೂಪ ಜೆ ರೈ ನೆರವೇರಿಸಿದರು.


Share with

Leave a Reply

Your email address will not be published. Required fields are marked *