ಉಡುಪಿ: ವಿಶ್ವದಾದ್ಯಂತ ಹತ್ತನೇ ಅಂತರಾಷ್ಟ್ರೀಯ ಯೋಗ ದಿನವನ್ನು ಇಂದು ಆಚರಣೆ ಮಾಡಲಾಗುತ್ತಿದೆ. ಉಡುಪಿ ಪೇಜಾವರ ಮಠಾಧೀಶರಾದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ತೆಲಂಗಾಣ ರಾಜ್ಯದ ಪ್ರವಾಸದಲ್ಲಿದ್ದು, ಸಿಕಂದರಾಬಾದ್ ನಲ್ಲಿದ್ದಾರೆ. ಪೂರ್ಣಬೋಧ ವಿದ್ಯಾಪೀಠ ಮಠದಲ್ಲಿ ಯೋಗಾಭ್ಯಾಸವನ್ನು ನಡೆಸಿದರು. ಪ್ರತಿದಿನ ಬೆಳಿಗ್ಗೆ ವಿವಿಧ ಕಠಿಣ ಯೋಗ ಭಂಗಿಗಳನ್ನು ಅಭ್ಯಾಸ ಮಾಡುವ ಪೇಜಾವರ ಶ್ರೀಗಳು, ನೂರಕ್ಕಿಂತಲೂ ಹೆಚ್ಚಿನ ಆಸನಗಳನ್ನು ಸುಲಲಿತವಾಗಿ ಮಾಡುತ್ತಾರೆ. ಇಂದು ವಿಶ್ವಯೋಗ ದಿನದ ಪ್ರಯುಕ್ತ ಶಿಷ್ಯರ ಜೊತೆ ಪೇಜಾವರ ಸ್ವಾಮೀಜಿ ಯೋಗಾಸನಗಳನ್ನು ಅಭ್ಯಾಸ ಮಾಡಿದರು.