ತಮಿಳು ನಟ ಧನುಷ್ ಹಾಗೂ ಮೃಣಾಲ್ ಠಾಕೂರ್ ಇತ್ತೀಚೆಗೆ ಡೇಟಿಂಗ್‌ನಲ್ಲಿ ಇದ್ದಾರೆ. ಒಟ್ಟೊಟ್ಟಿಗೆ ಹಲವಾರು ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾದ ವಿಡಿಯೋ ಹಾಗೂ ಫೋಟೋಗಳು ವೈರಲ್ ಆಗಿದ್ದವು. ಇದೀಗ ಇದೆಲ್ಲ ಕಾರಣಗಳಿಗೆ ಮತ್ತಷ್ಟು ಪುಷ್ಟಿಕೊಡುವಂತೆ ನಟಿ ಮೃಣಾಲ್ ಅವರು ಧನುಷ್ ಪೋಸ್ಟ್‌ಗೆ ಕಮೆಂಟ್ ಮಾಡಿ ಸಿಕ್ಕಾಕಿಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಧನುಷ್ ಅವರು ಹಂಚಿಕೊಂಡ ಫೋಟೋಗೆ ಮೃಣಾಲ್ ಠಾಕೂರ್ ಭಾರಿ ಉತ್ಸಾಹದಲ್ಲಿ ಕಮೆಂಟ್ ಮಾಡಿದ್ದಾರೆ. `ಸರ್..ಎಂಥ ಅದ್ಭುತ ಪಯಣ. ಬ್ಲಾಕ್ ಬಸ್ಟರ್, ಕಲ್ಟ್, ಲೆಗೆಸಿ’ ಎಂದ ಅವರು ಕಮೆಂಟ್ ಮಾಡಿದ್ದು, ಅದಕ್ಕೆ ಧನುಷ್ ಪ್ರತಿಕ್ರಿಯೆ ನೀಡಿದ್ದಾರೆ. ಅಪ್ಪುಗೆ ಮತ್ತು ಬಿಳಿ ಹಾರ್ಟ್ ಎಮೋಜಿಯನ್ನು ಧನುಷ್ ಕಮೆಂಟ್ ಮಾಡಿದ್ದಾರೆ. ಈ ಪೋಸ್ಟ್ ಈಗ ವೈರಲ್ ಆಗುತ್ತಿದೆ. ಸೌತ್ ಇಂದ ಹಿಡಿದು ಬಾಲಿವುಡ್ ವರೆಗೂ ಈ ಸುದ್ದಿ ಗಾಳಿಯಲ್ಲಿ ಗುಲ್ಲೆಬ್ಬಿಸಿದೆ.
’ಸನ್ ಆಫ್ ಸರ್ದಾರ್-2′ ಸಿನಿಮಾದ ಪ್ರೀಮಿಯರ್ ವೇಳೆ ಮೃಣಾಲ್ ಠಾಕೂರ್ ಮತ್ತು ಧನುಷ್ ಅವರು ಜೊತೆಯಾಗಿ ಕಾಣಿಸಿಕೊಂಡಿದ್ದರು. `ತೇರೆ ಇಷ್ಕ್ ಮೇ’ ಸಿನಿಮಾದ ಶೂಟಿಂಗ್ ಮುಗಿದಾಗಲೂ ಧನುಷ್ ಜೊತೆ ಮೃಣಾಲ್ ಠಾಕೂರ್ ಅವರು ಇದ್ದರು. ಧನುಷ್ ಅವರು ಸಹೋದರಿಯ ಇನ್‌ಸ್ಟಾಗ್ರಾಮ್ ಖಾತೆಯನ್ನು ಕೂಡ ಮೃಣಾಲ್ ಅವರು ಫಾಲೋ ಮಾಡಲು ಆರಂಭಿಸಿದ್ದಾರೆ. ಈ ಎಲ್ಲ ಕಾರಣದಿಂದ ಧನುಷ್ ಮತ್ತು ಮೃಣಾಲ್ ಬಗ್ಗೆ ಡೇಟಿಂಗ್ ಗಾಸಿಪ್ ಹಬ್ಬಿದೆ.
ಧನುಷ್ ಅವರು ಸೂಪರ್‌ಸ್ಟಾರ್ ರಜನಿಕಾಂತ್ ಅವರ ಪುತ್ರಿಗೆ ವಿಚ್ಚೇದನ ನೀಡಿದ ಬಳಿಕ ಮೃಣಾಲ್ ಜೊತೆ ಡೇಟಿಂಗ್‌ನಲ್ಲಿ ಇದ್ದಾರೆ ಎನ್ನಲಾಗುತ್ತಿದೆ. ನಟ ಧನುಷ್ ಅವರಿಗೆ 42 ವರ್ಷವಾದರೆ ಮೃಣಾಲ್‌ಗೆ 33 ವರ್ಷ. ಈ ಬಗ್ಗೆಯೂ ಭಾರಿ ಚರ್ಚೆ ಶುರುವಾಗಿದೆ.




