ಮುಂಬೈ ಕರಾವಳಿಯ ಗೇಟ್‌ವೇ ಆಫ್ ಇಂಡಿಯಾದಲ್ಲಿ ಪೊಲೀಸರು ಅನುಮಾನಾಸ್ಪದ ಮೀನುಗಾರಿಕೆ ದೋಣಿಯನ್ನು ವಶಪಡಿಸಿಕೊಂಡಿದ್ದಾರೆ.
ಅಬ್ದುಲ್ಲಾ ಶರೀಫ್ ಎಂಬ ಹೆಸರಿನ ದೋಣಿ ಕುವೈತ್‌ನಿಂದ ಬಂದಿದ್ದು, ಅದರಲ್ಲಿದ್ದ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದರು. ಈ ಮೂವರೂ ಮೂಲತಃ ತಮಿಳುನಾಡಿನ ಕನ್ಯಾಕುಮಾರಿಯವರು. ಕುವೈತ್‌ನಿಂದ ದೋಣಿ ಏಕೆ ಬಂದಿತು ಮತ್ತು ಮೂವರು ಅದರಲ್ಲಿ ಏಕೆ ಇದ್ದರು ಎಂದು ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.