ಮುಂಡಾಜೆ: ಕಾಡು ಹಂದಿಗಳಿಂದ ಅಡಕೆ ಗಿಡ ನಾಶ

Share with

ಮುಂಡಾಜೆ: ವನ್ಯ ಮೃಗಗಳು ನಾಡಿಗೆ ಇಳಿಯುತ್ತಿದ್ದು ಇದೀಗ ಜನವಸತಿ ಕೇಂದ್ರಗಳ ಬಳಿಯು ಕಂಡು ಬರುತ್ತಿದ್ದು ಸಾಕಷ್ಟು ಕೃಷಿ ನಾಶವನ್ನು ಮಾಡುತ್ತಾ ಗ್ರಾಮೀಣ ಭಾಗದ ರೈತರ ನಿದ್ದೆಗೆಡಿಸುತ್ತಿವೆ. ಅಡಕೆ, ತೆಂಗು, ಬಾಳೆ ತೋಟಗಳಿಗೆ ತಾಲೂಕಿನ ಅನೇಕ ಗ್ರಾಮಗಳಲ್ಲಿ ಕಾಡಾನೆಗಳು ದಾಳಿ ಇಡುತ್ತಿದ್ದು ಕೃಷಿ ಹಾನಿ ಉಂಟು ಮಾಡುತ್ತಿವೆ. ನವಿಲುಗಳು ಭತ್ತದ ಗದ್ದೆಗಳಲ್ಲಿ ಬೆಳೆನಾಶ ಮಾಡುತ್ತಿವೆ.

ಕಾಡು ಹಂದಿಗಳು ಅಡಕೆ ಗಿಡಗಳನ್ನು ಮುರಿದು ಹಾಕುವುದು ಕಂಡುಬಂದಿದೆ.

ಮಂಗಗಳ ಕಾಟವಂತು ವಿಪರೀತವಾಗಿದೆ. ಇದರ ಜತೆ ಇದೀಗ ಕಾಡು ಹಂದಿಗಳು ಅಡಕೆ ಗಿಡಗಳನ್ನು ಮುರಿದು ಹಾಕುವುದು ಕಂಡುಬಂದಿದೆ. ಮುಂಡಾಜೆಯ ಕಡಂಬಳ್ಳಿ ಕೊಚ್ಚಿ ನಿವಾಸಿ ಪ್ರಮೋದ ಭಿಡೆಯವರ ತೋಟಕ್ಕೆ ದಾಳಿ ಇಟ್ಟ ಕಾಡು ಹಂದಿಗಳ ಗುಂಪು ನೂರಕ್ಕಿಂತ ಅಧಿಕ ಅಡಕೆ ಗಿಡಗಳನ್ನು ಮುರಿದು ಹಾಕಿದೆ. ಸುಮಾರು ಎರಡು ವರ್ಷಕ್ಕಿಂತ ಅಧಿಕಪ್ರಾಯದ ಅಡಕೆ ಗಿಡಗಳನ್ನು ಕಾಡು ಹಂದಿಗಳು ಮಧ್ಯಭಾಗದಿಂದ ಕತ್ತರಿಸಿ ಹಾಕಿದ್ದು ಕೃಷಿ ನಾಶ ಉಂಟಾಗಿದೆ.

ಇದಲ್ಲದೆ ಕಾಡು ಹಂದಿಗಳು ಹಣ್ಣಡಕೆಯನ್ನು ಜಗಿದು ಹಾಕುತ್ತಿವೆ. ಪ್ರಸ್ತುತ ಹಣ್ಣಡಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬೀಳುತ್ತಿದ್ದು, ಹಂದಿಗಳು ಜಗಿದು ಹಾಕುವ ಅಡಕೆ ಉಪಯೋಗಕ್ಕೆ ಸಿಗದಂತಾಗಿದೆ. ತಾಲೂಕಿನ ಹೆಚ್ಚಿನ ಭಾಗಗಳಲ್ಲಿ ವನ್ಯಜೀವಿಗಳು ಕೃಷಿ ನಾಶ ಉಂಟು ಮಾಡುತ್ತಿದ್ದು ಜನರಲ್ಲಿ ಭೀತಿಯ ವಾತಾವರಣವಿದ್ದು ಈ ಬಗ್ಗೆ ಸಂಬಂಧಪಟ್ಟ ಇಲಾಖೆ, ಜನಪ್ರತಿನಿಧಿಗಳು ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ರೈತರು ಆಗ್ರಹಿಸಿದ್ದಾರೆ.


Share with

Leave a Reply

Your email address will not be published. Required fields are marked *