ಹೃದಯಘಾತದಿಂದ ಮುಸ್ಲಿಂಲೀಗ್ ನೇತಾರ ನಿಧನ

Share with


ಉಪ್ಪಳ:  ಮುಸ್ಲಿಂಲೀಗ್ ನೇತಾರ ಕೈಕಂಬ ನಿವಾಸಿ ಕೆ. ಇಬ್ರಾಹಿಂ ಹಾಜಿ [೭೧] ನಿಧನರಾಗಿದ್ದಾರೆ. ಶನಿವಾರ ಬೆಳಿಗ್ಗೆ ಮನೆಯಲ್ಲಿ ಹೃದಯಘಾತದಿಂದ ನಿಧನರಾದರು. ಇವರು ಈ ಹಿಂದೆ ಗಲ್ಫ್ನಲ್ಲಿ ಹೋಟೇಲ್ ವ್ಯಾಪಾರಿಯಾಗಿದ್ದರು. ಮುಸ್ಲಿಂಲೀಗ್ ಮಂಗಲ್ಪಾಡಿ ಪಂಚಾಯತ್ ಕಮಿಟಿಯ ಮಾಜಿ ಅಧ್ಯಕ್ಷರು, ಕಾರ್ಯದರ್ಶಿಯಾಗಿದ್ದರು. ಉಪ್ಪಳ ಗೇಟ್ ಕುನ್ನಿಲ್ ಜುಮ ಮಸೀದಿಯ ಕಾರ್ಯದರ್ಶಿಯಾಗಿದ್ದರು. ಮೃತರ ಪತ್ನಿ ಆಸಿಯಮ್ಮ, ಮಕ್ಕಳಾದ ಲತೀಫ್, ಸಾಧಿಕ್, ಮಿರ್ಸಾನ, ಅಳಿಯ ಅಶ್ರಫ್, ಸೊಸೆಯಂದಿರಾದ ಸುಮಯ್ಯ, ರುಕ್ಸಾನ, ಸಹೋದರ ಸಹೋದರಿಯರಾದ ಅಬ್ದುಲ್ಲ, ಯೂಸಫ್, ಮರಿಯಮ್ಮ, ಅಬೂಬಕ್ಕರ್ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ  ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.


Share with

Leave a Reply

Your email address will not be published. Required fields are marked *