ಮೈಸೂರು: ಆಪರೇಷನ್ ವೇಳೆ ದಂಗಾದ ವೈದ್ಯರು, ಮಹಿಳೆ ದೇಹದಲ್ಲಿ 861 ಕಲ್ಲುಗಳು ಪತ್ತೆ

Share with

ಮೈಸೂರು, ಜೂನ್ 08: ಮಹಿಳೆಯ ದೇಹದಿಂದ 861 ಕಲ್ಲುಗಳನ್ನು (stones) ವೈದ್ಯರು ಹೊರ ತೆಗೆದಿರುವಂತಹ ಘಟನೆಯೊಂದು ನಗರದಲ್ಲಿ ನಡೆದಿದೆ. ಮೈಸೂರಿನ ಕಾವೇರಿ ಆಸ್ಪತ್ರೆಯ ವೈದ್ಯರಿಂದ ನಡೆದ ಅಪರೂಪದ ಶಸ್ತ್ರ ಚಿಕಿತ್ಸೆ ಯಶಸ್ವಿ ಆಗಿದೆ. ವೈದ್ಯರ ತಪಾಸಣೆ ವೇಳೆ ಮಹಿಳೆಯ ಗಾಲ್ ಬ್ಲಾಡರ್ ಮತ್ತು ಬೈಲ್ ಡಕ್ಟ್ನಲ್ಲಿ ಕಲ್ಲುಗಳು ಇರುವುದು ಪತ್ತೆ ಆಗಿದೆ. ಕೂಡಲೇ ಎಂಡೋಸ್ಕೋಪಿಕ್ ರೆಟ್ರೋಗ್ರೇಡ್ಕೊಲೆಂಜಿಯೊಪ್ಯಾಂಕ್ರಿಯಾಟೋಗ್ರಫಿ (ERCP) ವಿಧಾನದ ಮ‌ೂಲಕ ಶಸ್ತ್ರಚಿಕಿತ್ಸೆ ಮಾಡಿ ಕಲ್ಲುಗಳನ್ನು ಹೊರ ತೆಗೆದಿದ್ದಾರೆ.

55 ವರ್ಷದ ಮಹಿಳೆಯೋರ್ವರು ಹೊಟ್ಟೆನೋವು ಮತ್ತು ಜಾಂಡೀಸ್ನಿಂದ ಬಳಲುತ್ತಿದ್ದರು. ಹೀಗಾಗಿ ತಪಾಸಣೆ ಮಾಡಿದ ವೈದ್ಯರು, ಗಾಲ್ ಬ್ಲಾಡರ್ ಮತ್ತು ಬೈಲ್ ಡಕ್ಟ್ನಲ್ಲಿದ್ದ ಕಲ್ಲುಗಳ ರಾಶಿಯನ್ನು ಕಂಡು ವೈದ್ಯರೇ ಶಾಕ್ ಆಗಿದ್ದಾರೆ.

ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ.ನಿಖಿಲ್ ಕುಮಾರ್ ಜೋಗೆ ಹಾಗೂ ಲ್ಯಾಪರೊಸ್ಕೋಪಿಕ್ ಸೀನಿಯರ್ ಸರ್ಜನ್ ಡಾ. ಆರ್ಎಂ ಅರವಿಂದ್ ಅವರ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, 861 ಕಲ್ಲುಗಳನ್ನನು ಹೊರ ತೆಗೆಯಲಾಗಿದೆ. ಶಸ್ತ್ರಚಿಕಿತ್ಸೆ ನಡೆದ ಮರುದಿನವೇ ಮಹಿಳೆಯನ್ನು ಡಿಸ್ಚಾರ್ಜ್ ಮಾಡಲಾಗಿದೆ.


Share with

Leave a Reply

Your email address will not be published. Required fields are marked *