ಮಂಜೇಶ್ವರ ಕನಿಲ ಶ್ರೀ ಭಗವತಿ ಕ್ಷೇತ್ರದ ನಡಾವಳಿ ಉತ್ಸವ ಮಾ.23 ರಂದು

Share with

ಮಂಜೇಶ್ವರ: ಮಂಜೇಶ್ವರ ಕನಿಲ ಶ್ರೀ ಭಗವತಿ ಕ್ಷೇತ್ರದ ನಡಾವಳಿ ಉತ್ಸವವು ಮಾ.23ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು. ಇದರ ಅಂಗವಾಗಿ 18ರಂದು ಬೆಳಗ್ಗೆ 7.30ಕ್ಕೆ ಗಣಪತಿ ಹೋಮ, 9ಕ್ಕೆ ಗೊನೆಮುಹೂರ್ತ, 23ರಂದು ಬೆಳಗ್ಗೆ 8.30ಕ್ಕೆ ಶ್ರೀ ಕ್ಷೇತ್ರ ಭಂಡಾರ ನಿಲಯದಿಂದ ಭಂಡಾರ ಹೊರಡುವುದು, 10ಕ್ಕೆ ಭಜನೆ ಆರಂಭ, ಮಧ್ಯಾಹ್ನ 12ಕ್ಕೆ ಮಹಾಪೂಜೆ, 7ರಿಂದ 8ರವರೆಗೆ ಅನ್ನಸಂತರ್ಪಣೆ, ಕುಣಿತ ಭಜನೆ, 8ರಿಂದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರಾಭರಣ ಸಮಿತಿ ಅಧ್ಯಕ್ಷ ವಿಶ್ವನಾಥ ಕುದೂರು ವಹಿಸುವರು. ಕೃಷ್ಣ.ಎನ್. ವ್ಯವಸ್ಥಾಪನಾ ಸಮಿತಿಯ ಗೌರವಾಧ್ಯಕ್ಷ ಉಚ್ಚಿಲ್ ಉದ್ಘಾಟಿಸುವರು. ಗೌರವಾಧ್ಯಕ್ಷ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ದೀಪ ಬೆಳಗಿಸುವರು.

ವಿವಿಧ ಕ್ಷೇತ್ರಗಳ ಮುಖಂಡರುಗಳಾದ ಗೋಪಾಲ್.ಎಂ ಬಂದ್ಯೋಡು, ಮೋಹನ್ ಶೆಟ್ಟಿ ತೂಮಿನಾಡು, ಕೆ.ಕೆ.ಶೆಟ್ಟಿ ಮುಂಡಪಳ್ಳ, ಮಹಾಬಲೇಶ್ವರ ಭಟ್, ಜನಾರ್ದನ್ ಮಲ್ಪೆ, ಗಣೇಶ್ ಬಜಾಲ್, ಉಮೇಶ್ ಸಾಲ್ಯಾನ್, ಬಾಬು ಟಿ ಬಂಗೇರ ಮುಂಬಯಿ, ವೈ.ಬಿ.ಸುಂದರ್ ಇರಾ, ಪದ್ಮನಾಭ ಕಾಡಪ್ಪ, ಮೋತಿಕಿರಣ್ ಉಪೇಂದ್ರ ಮೊದಲಾದವರು ಉಪಸ್ಥಿತರಿದ್ದರು. ದೇವದಾಸ್.ವಿ ಸ್ವಾಗತಿಸುವರು. ಸೋಮಶೇಖರ.ಎಂ.ಎನ್ ವಂದಿಸಿದರು. ರಾತ್ರಿ 9ರಿಂದ ಭರತನಾಟ್ಯ, ಲಘು ನೃತ್ಯ ಹಾಗೂ ಜಾನಪದ ನೃತ್ಯ, ರಾತ್ರಿ 11.30ರಿಂದ ನಡಾವಳಿ ಉತ್ಸವ ಆರಂಭ, 24ರಂದು ಬೆಳಗ್ಗೆ 8ಕ್ಕೆ ಭಂಡಾರ ಇಳಿಯುವುದು.


Share with

Leave a Reply

Your email address will not be published. Required fields are marked *