ನಾಗರಕೋವಿಲ್ – ಮಂಗಳೂರು ಜಂಕ್ಷನ್: ಜ.23ರಂದು ಅಮೃತಭಾರತ್ ರೈಲು ಸಂಪರ್ಕಕ್ಕೆ ಮೋದಿಯಿಂದ ಚಾಲನೆ

Share with

ಮಂಗಳೂರು: ನಾಗರಕೋವಿಲ್ ಹಾಗೂ ಮಂಗಳೂರು ಜಂಕ್ಷನ್ ಮಧ್ಯೆ ಹೊಸ ಅಮೃತಭಾರತ್ ರೈಲು ಸಂಪರ್ಕಕ್ಕೆ ಚಾಲನೆ ನೀಡಲಾಗುತ್ತಿದೆ.

ಇದು ತಮಿಳುನಾಡು, ಕೇರಳ ಮತ್ತು ಕರ್ನಾಟಕದಾದ್ಯಂತ ಪ್ರಮುಖ ಸಾಂಸ್ಕೃತಿಕ, ಶೈಕ್ಷಣಿಕ, ವಾಣಿಜ್ಯ ಮತ್ತು ಯಾತ್ರಾ ಕೇಂದ್ರಗಳನ್ನು ಸಂಪರ್ಕಿಸುತ್ತದೆ. ಲಕ್ಷಾಂತರ ಪ್ರಯಾಣಿಕರು ಈ ಸಂಪರ್ಕದಿಂದ ಪ್ರಯೋಜನ ಪಡೆಯುವ ನಿರೀಕ್ಷೆಯಿದೆ.

ಇದು ಸಾಪ್ತಾಹಿಕ ಸೇವೆಯಾಗಿದ್ದು, ಜ. 23ರಂದು ಇತರ ಎರಡು ಅಮೃತಭಾರತ್ ರೈಲುಗಳ ಜತೆ ಪ್ರಧಾನಿ ನರೇಂದ್ರ ಮೋದಿ ಅವರು ತಿರುವನಂತಪುರದಲ್ಲಿ ಚಾಲನೆ ನೀಡಲಿದ್ದಾರೆ.

22 ಬೋಗಿಗಳ ಅಮೃತಭಾರತ್ ರೈಲಿನಲ್ಲಿ ಎಸಿ ಕೋಚ್ ಇರುವುದಿಲ್ಲ. ರೈಲಿಗೆ 11 ಸಾಮಾನ್ಯ, 8 ಸೆಕೆಂಡ್ ಸ್ಲಿàಪರ್ ಇರಲಿದೆ. ನಾಗರಕೋಯಿಲ್ ಮಂಗಳೂರು ಮಧ್ಯೆ ಸಂಚರಿಸುವ ರೈಲುಗಳ ಸಂಖ್ಯೆ 16329/16330 ಆಗಿರುತ್ತದೆ.

ನಾಗರಕೋವಿಲ್ ನಿಂದ ಮಂಗಳವಾರ ಬೆಳಗ್ಗೆ 11.40ಕ್ಕೆ ಹೊರಟು ಬುಧವಾರ ಬೆಳಗ್ಗೆ ಮಂಗಳೂರು ತಲಪಲಿದೆ. ಮಂಗಳೂರಿನಿಂದ ಬುಧವಾರ ಬೆಳಗ್ಗೆ 8ಕ್ಕೆ ಹೊರಟು ನಾಗರಕೋವಿಲ್ ಗೆ ರಾತ್ರಿ ತಲಪಲಿದೆ. ರೈಲಿನ ವಿಸ್ತ್ರತ ವೇಳಾಪಟ್ಟಿ ಇನ್ನೂ ನೀಡಲಾಗಿಲ್ಲ.


Share with

Leave a Reply

Your email address will not be published. Required fields are marked *