ಕಾಸರಗೋಡು: ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಆರಾಟ್ ಕೆರೆಯ ಬಳಿಯ ಮೂಲ ಸ್ಥಾನ ಶ್ರೀ ನಾಗದೇವರ ಕಟ್ಟೆಯಲ್ಲಿನಾಗರಪಂಚಮಿ ಕಾರ್ಯಕ್ರಮ ಸೂರ್ಯ ನಾರಾಯಣ ಪುರೋಹಿತರ ನೇತೃತ್ವದಲ್ಲಿ ಅಚ ರಿಸಲಾಯಿತು ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ, ಸಿಯಾಳ ಅಭಿಷೇಕ ಮಹಾಪೂಜೆ ಜರಗಿತು. ಈ ಸಂದರ್ಭದಲ್ಲಿ ನಾಗರಾಜ ಕಟ್ಟೆ ಸಮಿತಿ ಅಧ್ಯಕ್ಷರಾದ ಧಾರ್ಮಿಕ. ಸಾಮಾಜಿಕ ಮುಂದಾಳು ಕೆ.ಎನ್.ವೆಂಕಟ್ರಮಣ ಹೊಳ್ಳ, ಉಪಾಧ್ಯಕ್ಷ ರಾದ ಲಕ್ಷ್ಮೀಶ ಭಟ್, ಮಹೇಶ್ ಭಟ್, ಕಾರ್ಯದರ್ಶಿ ಸಾಯಿನಾಥ್ ರಾವ್ , ಸಮಿತಿ ಸದಸ್ಯರು ಹಾಗೂ ಭಕ್ತಾದಿಗಳು ದೇವರ ಸೇವೆಯಲ್ಲಿ ಪಾಲ್ಗೊಂಡರು.