ಅಸ್ಸಾಂನ ಕಛರ್ ಜಿಲ್ಲಾ BJP ಕಚೇರಿಯಲ್ಲಿ ನಿಗೂಢ ರೀತಿಯಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. 48 ವರ್ಷದ ಸುಧಾಂಗ್ಯು ದಾಸ್ ಮೃತ ವ್ಯಕ್ತಿಯಾಗಿದ್ದು, VIP ಕೊಠಡಿಯಲ್ಲಿ ಶವ ಪತ್ತೆಯಾಗಿದೆ.
ಆದರೆ, ಮೃತದೇಹದ ಮೇಲೆ ಒಂದು ತುಂಡೂ ಬಟ್ಟೆ ಇಲ್ಲದ್ದು ಅಚ್ಚರಿ ಮೂಡಿಸಿದ್ದು, ಹಲವು ಅನುಮಾನಗಳಿಗೂ ಕಾರಣವಾಗಿದೆ. ಮೃತ ವ್ಯಕ್ತಿ BJP ಕಚೇರಿಯ ಸಿಬ್ಬಂದಿಯೂ ಅಲ್ಲ, ಕಾರ್ಯಕರ್ತನೂ ಅಲ್ಲ ಎಂದು BJP ಜಿಲ್ಲಾಧ್ಯಕ್ಷರು ಹೇಳಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.