ಕೇರಳ ಸೇರಿ 4 ರಾಜ್ಯದ 95 ಲಕ್ಷ ಜನರ ಹೆಸರು ಮತಪಟ್ಟಿಯಿಂದ ಡಿಲಿಟ್

Share with

ನವದೆಹಲಿ: ವಿಶೇಷ ಮತಪಟ್ಟಿ ಪರಿಷ್ಕರಣೆ ಪ್ರಕ್ರಿಯೆಗೆ ಒಳಗಾದ ಕೇರಳ, ಮಧ್ಯಪ್ರದೇಶ, ಛತ್ತೀಸ್‌ಗಢ, ಅಂಡಮಾನ್ ಮತ್ತು ನಿಕೋಬಾರ್‌ನ ಮತದಾರರ ಕರಡು ಪಟ್ಟಿ ಮಂಗಳವಾರ ಪ್ರಕಟಗೊಂಡಿದ್ದು, ಸುಮಾರು 95 ಲಕ್ಷ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಕರಡುಪಟ್ಟಿ ಪ್ರಕಾರ, ಮಧ್ಯಪ್ರದೇಶದಲ್ಲಿ 5.74 ಕೋಟಿ ಮತದಾರರಲ್ಲಿ 42.74 ಲಕ್ಷ ಮತದಾರರನ್ನು ಅಳಿಸಲಾಗಿದೆ. ಕೇರಳದಲ್ಲಿ 2.78 ಕೋಟಿ ಮತದಾರರಲ್ಲಿ 24.08 ಲಕ್ಷ ಮಂದಿ ಹೆಸರುಗಳನ್ನು ಅಳಿಸಲಾಗಿದೆ. ಛತ್ತೀಸ್‌ಗಢದಲ್ಲಿ 2.12 ಕೋಟಿ ಮತದಾರರಿದ್ದು, ಅದರಲ್ಲಿ 27.34 ಮಂದಿ ಕೈಬಿಡಲಾಗಿದೆ. ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ ಒಟ್ಟು 3. 10 ಲಕ್ಷ ಮತದಾರರಿದ್ದು, ಅದರಲ್ಲಿ 64000 ಮಂದಿ ಹೆಸರು ಕೈಬಿಡಲಾಗಿದೆ.


Share with

Leave a Reply

Your email address will not be published. Required fields are marked *