ಕಾಸರಗೋಡು ಕರಂದಕ್ಕಾಡು ಬಿಲ್ಲವ ಸೇವಾ ಸಂಘದಲ್ಲಿ ನಾರಾಯಣ ಗುರುಗಳ ಪ್ರತಿಷ್ಠಾ ದಿನಾಚರಣೆ, ಸತ್ಯನಾರಾಯಣ ಪೂಜೆ ಹಾಗೂ ಗುರುಪೂಜೆ

Share with

ಕಾಸರಗೋಡು: ಬ್ರಹ್ಮಶ್ರೀ ನಾರಾಯಣ ಗುರುಗಳ 19ನೇ ವರ್ಷದ ಪ್ರತಿಷ್ಠಾ ದಿನಾಚರಣೆ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಗುರು ಪೂಜೆ ಡಿ 25 ರಂದು ವಿಜೃಂಭಣೆಯಿಂದ ಜರಗಿತು.

ಬೆಳಗ್ಗೆ ಗಣಪತಿ ಹೋಮ ನಡೆದ ಬಳಿಕ ಸತ್ಯನಾರಾಯಣ ಪೂಜೆ ನಡೆಯಿತು. ಬಳಿಕ ಅನ್ನಪೂರ್ಣೇಶ್ವರಿ ಭಜನಾ ವೃಂದ ಇವರಿಂದ ಭಜನಾ ಕಾರ್ಯಕ್ರಮ ಜರಗಿತು
ಬಳಿಕ ಮಹಾಪೂಜೆ ನಡೆದು ನಾರಾಯಣ ಗುರುಗಳಿಗೆ ಗುರುಪೂಜೆ ನೆರವೇರಿತು. ಬಳಿಕ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನೆರವೇರಿತು.

ಸಂಜೆ ಕಾಸರಗೋಡು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ರಘು ಕೆ ರವರ ಅಧ್ಯಕ್ಷತೆಯಲ್ಲಿ ಸಭಕರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಮುಲ್ಕಿ ರಾಷ್ಟ್ರೀಯ ಬಿಲ್ಲವ ಮಹಾ ಮಂಡಲ ಅಧ್ಯಕ್ಷ ರಾಜಶೇಖರ್ ಕೋಟ್ಯಾನ್ ರವರು ಉದ್ಘಾಟಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಧಾರ್ಮಿಕ ಮುಂದಾಳು ವೀರಪ್ಪ ಅಂಬಾರು ರವರು ಧಾರ್ಮಿಕ ಭಾಷಣಗೈದರು. ಮುಖ್ಯ ಅತಿಥಿಗಳಾಗಿ ಶಿಕ್ಷಕಿ ಸಾಹಿತಿ ವಿಜಯಲಕ್ಷ್ಮೀ ಕಟೀಲು, ವಾರ್ಡ್ ಕೌನ್ಸಿಲರ್ ಹೇಮಲತಾ ಉಪಸ್ಥಿತರಿದ್ದರು.
ಉಪ್ಪಳ ಬಿಲ್ಲವ ಒಕ್ಕೂಟ ಅಧ್ಯಕ್ಷ ಕೃಷ್ಣಪ್ಪ ದೇರಂಬಳ, ಕಾಸರಗೋಡು ಬಿಲ್ಲವ ಸೇವಾ ಸಂಘ ಮಾಜಿ ಅಧ್ಯಕ್ಷ ಶಿವ ಸೂರ್ಲು, ಮಧೂರು ಘಟಕ ಬಿಲ್ಲವ ಸೇವಾ ಸಂಘ ಅಧ್ಯಕ್ಷ ಉಮೇಶ, ಬೆದೃಡ್ಕ ಘಟಕ ಬಿಲ್ಲವ ಸೇವಾ ಸಂಘ ಅಧ್ಯಕ್ಷ ಯೋಗೀಶ, ರಾಷ್ಟ್ರೀಯ ಬಿಲ್ಲವ ಮಹಾಮಂಡಳಿ ಕಾರ್ಯಕಾರಿ ಸಮಿತಿ ಸದಸ್ಯ ಸುಕೀರ್ಥಿ ವರ್ಮ, ಮಂಗಲ್ಪಾಡಿ ಬಿಲ್ಲವ ಸೇವಾ ಸಂಘ ಅಧ್ಯಕ್ಷ ಸಚಿನ್ ಸಿ ಶುಭಾಂಸನೆಗೈದರು.

ಅಡ್ಕತಬೈಲ್ ಕೋಟಿ ಚೆನ್ನಯ ಬ್ರಹ್ಮ ಬೈದರ್ಕಳ ಗರಡಿ ಮುಖ್ಯ ಕರ್ಮಿ ರಮೇಶ್ ಪೂಜಾರಿ, ಪಳ್ಳದಕೊಟ್ಯ ಧೂಮಾವತಿ ದೈವಸ್ಥಾನ ಮುಖ್ಯ ಕರ್ಮಿ ಸಂಜೀವ ಪೂಜಾರಿ, ಕಾಳ್ಯಂಗಾಡು ಮೂಕಾಂಬಿಕಾ ಕ್ಷೇತ್ರ ಆಡಳಿತ ಮೊಕ್ತೇಸರ ಅಚ್ಯುತ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ರಾಜಶೇಖರ್ ಕೋಟ್ಯಾನ್ ರವರಿಗೆ ಪೌರ ಸನ್ಮಾನ ಮಾಡಿ ಗೌರವಿಸಲಾಯಿತು.

ಈ ವೇಳೆ ಆಯೋಜಿಸಿದ್ದ ಆಟೋಟ ಸ್ಫರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕಾಸರಗೋಡು ಬಿಲ್ಲವ ಸೇವಾ ಸಂಘ ಪ್ರಧಾನ ಕಾರ್ಯದರ್ಶಿ ಹರಿಕಾಂತ್ ಸಾಲ್ಯಾನ್ ಸ್ವಾಗತಿಸಿದರು. ಕಾರ್ಯಕ್ರಮವನ್ನು ಜಯಶೀಲ ಸುವರ್ಣ, ಹರಿಕಾಂತ್ ನಿರೂಪಿಸಿದರು. ಕಾಸರಗೋಡು ಬಿಲ್ಲವ ಸೇವಾ ಸಂಘ ಉಪಾಧ್ಯಕ್ಷ ಪ್ರೇಮ್ ಜಿತ್ ಸಮರ್ಪನೆಗೈದರು.

ಮಧ್ಯಾಹ್ನ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕರಂದಕ್ಕಾಡು ವಿಹೆಚ್ ಫ್ರೆಂಡ್ಸ್ ಪ್ರಾಯೋಜಕತ್ವದಲ್ಲಿ ಕಲ್ಜಿಗದ ಮಾಯ್ಕಾರೆ ಪಂಜುರ್ಲಿ ನಾಟಕ ಜರಗಿತು.


Share with

Leave a Reply

Your email address will not be published. Required fields are marked *