ಬಂಟ್ವಾಳ : ನಾರಾಯಣ ಗುರುಗಳು ಬಿಂಬ ದರ್ಪಣವನ್ನು (ಕನ್ನಡಿಯನ್ನು) ಪ್ರತಿಷ್ಠಾಪಿಸಿ “ನಿಮ್ಮೊಳಗಿರುವ ಭಗವಂತನನ್ನು ಕಾಣಲು ಭಕ್ತಿ ಶ್ರದ್ಧೆಯಿಂದ ಪ್ರಯತ್ನಿಸಿ” ಎಂದು ಮಾನವಕುಲಕ್ಕೆ ಸಾರಿದ ಆ ಗುರುಗಳ ತತ್ವಯುಕ್ತವಾದ ಸಂದೇಶ ಎಲ್ಲರಿಗೂ ಆದರ್ಶ ಎಂದು ಯುವವಾಹಿನಿ ಬಂಟ್ವಾಳ ಘಟಕ ಅಧ್ಯಕ್ಷ
ದಿನೇಶ್ ಸುವರ್ಣ ರಾಯಿ ಹೇಳಿದರು.
ಅವರು ಯುವವಾಹಿನಿ ರಿ. ಬಂಟ್ವಾಳ ಘಟಕದ ಆಶ್ರಯದಲ್ಲಿ ಗೀತಾ ಜಗದೀಶ್ ನೆತ್ತರ ಕೆರೆ ಇವರ ಮನೆಯಲ್ಲಿ ಜರಗಿದ ಗುರುತತ್ವವಾಹಿನಿ ಮಾಲಿಕೆ-6 ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ನಿಕಟಪೂರ್ವ ಅಧ್ಯಕ್ಷರಾದ ಹರೀಶ್ ಕುದನೆ, ಮಾಜಿ ಅಧ್ಯಕ್ಷರಾದ, ನಾಗೇಶ್ ಪೊನ್ನೊಡಿ,ಅರುಣ್ ಕುಮಾರ್ ,ಪ್ರೇಮನಾಥ ಕೆ , ರಾಮಚಂದ್ರ ಸುವರ್ಣ ಹಾಗೂ ಪ್ರಥಮ ಉಪಾಧ್ಯಕ್ಷರಾದ ನಾರಾಯಣ ಪೂಜಾರಿ ಪಲ್ಲಿಕಂಡ, ಆರೋಗ್ಯ ನಿರ್ದೇಶಕ ಮಹೇಶ್ ಬೊಳ್ಳಾಯಿ, ಸಂಘಟನಾ ಕಾರ್ಯದರ್ಶಿಗಳಾದ ಉದಯ್ ಮೇನಾಡು, ಶೃಜನಿ ಬೊಳ್ಳಾಯಿ, ಸಾಂಸ್ಕೃತಿಕ ನಿರ್ದೇಶಕರಾದ ಧನುಷ್ ಮಧ್ವ,ಉದ್ಯೋಗ ಮತ್ತು ಭವಿಷ್ಯ ನಿರ್ದೆಶಕರಾದ ಕಿರಣ್ ಪೂಂಜರೆಕೋಡಿ, ವಿದ್ಯಾರ್ಥಿ ಸಂಘಟನ ನಿರ್ದೆಶಕರಾದ ಬ್ರಿಜೇಶ್ ಕಂಜತ್ತೂರು, ಮಹಿಳಾ ಸಂಘಟಕರಾದ ಹರಿಣಾಕ್ಷಿ ನಾವುರ, ಕ್ರೀಡಾ ನಿರ್ದೇಶಕರಾದ ಮಧುಸೂದನ್ ಮಧ್ವ, ವಿಧ್ಯಾನಿಧಿ ನಿರ್ದೇಶಕರಾದ ವಿಕ್ರಮ್ ಶಾಂತಿ ಸದಸ್ಯರಾದ ಪ್ರಶಾಂತ್ ಏರಮಲೆ,ನಯನಾ ಪಚ್ಚಿನಡ್ಕ,ಸುಲತಾ ಬಿ.ಸಿರೋಡ್, ಚಂದ್ರಶೇಖರ್ ಕಲ್ಯಾಣಾಗ್ರಹಾರ,ವಿಘ್ನೇಶ್ ಬೊಳ್ಳಾಯಿ, ಯತೀಶ್ ಬೊಳ್ಳಾಯಿ, ನಿಕೇಶ್ ಕೊಟ್ಯಾನ್,ಹರೀಶ್ ಅಜೆಕಲಾ, ನಾಗೇಶ್ ಏಲಬೆ,ಶ್ರವಣ್ ಬಿ.ಸಿರೋಡ್ ಮತ್ತಿತರರು ಉಪಸ್ಥಿತರಿದ್ದರು,
ನಾರಾಯಣ ಗುರು ತತ್ವ ಪ್ರಚಾರ ಹಾಗೂ ಅನುಷ್ಠಾನ ನಿರ್ದೇಶಕರು ಪ್ರಜಿತ್ ಅಮೀನ್ ಏರಮಲೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.