ಅಜ್ಞಾನದಿಂದ ಸುಜ್ಞಾನದೆಡೆಗೆ ಹಾದಿ ತೋರಿದ ಮಹಾನ್ ಮಾನವತಾವಾದಿ ನಾರಾಯಣ ಗುರುಗಳು: ರಾಜೇಶ್ ಸುವರ್ಣ

Share with

ಬಂಟ್ವಾಳ : ಅಗಾಧವಾದ ಧ್ಯಾನ ಶಕ್ತಿಯಿಂದ ಬುದ್ಧನಂತೆ ಕಂಗೊಳಿಸುತ್ತಿದ್ದ ನಾರಾಯಣಗುರುಗಳು ಜನರ ಅದರಲ್ಲೂ ಕೆಳಜಾತಿಗಳ ಆಕರ್ಷಣೆಯ ಕೇಂದ್ರ ಬಿಂದುವಾದರು. ತಾವು ಗಳಿಸಿದ ಅಪಾರವಾದ ಜ್ಞಾನ ಭಂಡಾರದಿಂದ ಜನರ ಅಜ್ಞಾನವ ಕಳೆದು ಸುಜ್ಞಾನವನಿತ್ತ ಮಹಾನ್ ಮಾನವತಾವಾದಿ ನಾರಾಯಣ ಗುರುಗಳು ಎಂದು ಯುವವಾಹಿನಿ ಬಂಟ್ವಾಳ ಘಟಕದ ಮಾಜಿ ಅಧ್ಯಕ್ಷ ರಾಜೇಶ್ ಸುವರ್ಣ ತಿಳಿಸಿದರು

ಅವರು ದಿನಾಂಕ 20.10.2024 ರಂದು ಬಂಟ್ವಾಳ ತಾಲೂಕಿನ ಪಚ್ಚಿನಡ್ಕ ನಯನಾ ಜಯಾ  ಇವರ ಮನೆಯಲ್ಲಿ ನಡೆದ ಗುರುತತ್ವವಾಹಿನಿ ಮಾಲಿಕೆ 16 ರಲ್ಲಿ ಗುರುಸಂದೇಶ ನೀಡಿದರು.

ಈ ಸಂದರ್ಭದಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ನಾರಾಯಣ ಗುರು ತತ್ವ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕ ಪ್ರಜಿತ್ ಅಮೀನ್ ಏರಮಲೆ, ಆರೋಗ್ಯ ನಿರ್ದೇಶಕರಾದ
ಮಹೇಶ್ ಬೊಳ್ಳಾಯಿ,ಮಾಜಿ ಅಧ್ಯಕ್ಷರಾದ, ನಾಗೇಶ್ ಪೊನ್ನೋಡಿ, ಪ್ರೇಮನಾಥ್ ಕರ್ಕೇರ, ಶಿವಾನಂದ ಎಂ, ಅರುಣ್ ಬಿ.ಸಿ ರೋಡ್ ಸದಸ್ಯರಾದ ,ಯತೀಶ್ ಬೊಳ್ಳಾಯಿ,ಯಶೋಧರ ಕಡಂಬಲ್ಕೆ, ಮಲ್ಲಿಕಾ ಪಚ್ಚಿನಡ್ಕ, ಪ್ರಶಾಂತ್ ಏರಮಲೆ, ನಾಗೇಶ್ ಏಲಬೆ,  ಜಗದೀಶ್ ತುಂಬೆ, ಅರ್ಜುನ್ ಅರಳ,ಸುಲತಾ ಬಿ.ಸಿ ರೋಡ್, ಮತ್ತಿತರರು ಉಪಸ್ಥಿತರಿದ್ದರು.

ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕರಾದ ಪ್ರಜಿತ್ ಅಮೀನ್ ಏರಮಲೆ ಸ್ವಾಗತಿಸಿ ವಂದಿಸಿದರು


Share with

Leave a Reply

Your email address will not be published. Required fields are marked *