ಬಂಟ್ವಾಳ : ಪ್ರಜಾಪ್ರಭುತ್ವ ದೇಶಕ್ಕಾಗಿ ಸ್ವಾತಂತ್ರ್ಯ ಪೂರ್ವದಲ್ಲಿ ಸ್ವಾತಂತ್ರ್ಯದ ಹೋರಾಟ ನಡೆಸಿದ ಅನೇಕರು ಒಂದೆಡೆಯಾದರೆ, ಇನ್ನೊಂದೆಡೆ ಸಮಾಜದಲ್ಲಿದ್ದ ಅಸ್ಪೃಶ್ಯತೆ, ಅಸಮಾನತೆಯನ್ನು ತೊಡೆದು ಹಾಕಲು ಸಾಮಾಜಿಕ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದ ಗುರುಗಳು, ಮಹಾತ್ಮಾ ಗಾಂದಿ, ರವೀಂದ್ರ ನಾಥ್ ಠಾಗೋರ್, ಅಂಬೇಡ್ಕರ್ ಮುಂತಾದ ಮಹಾನ್ ಸ್ವಾತಂತ್ರ್ಯ ಹೋರಾಟಗಾರರಿಗೆ ಪ್ರೇರಣೆಯಾದರು ಎಂದು ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ ತಿಳಿಸಿದರು
ಅವರು ಮಹಿಳಾ ಸಂಘಟನ ನಿರ್ದೇಶಕರಾದ ಹರೀಣಾಕ್ಷಿ ನವೀಶ್ ನಾವುರ ಇವರ ಮನೆಯಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ಆಶ್ರಯದಲ್ಲಿ ನಡೆದ ಗುರು ತತ್ವ ವಾಹಿನಿ (ಮಾಲಿಕೆ 7)ರ ಕಾರ್ಯಕ್ರಮದಲ್ಲಿ ಅಭಿಪ್ರಾಯ ಪಟ್ಟರು.
ಮಾಜಿ ಅಧ್ಯಕ್ಷರಾದ, ಶಿವಾನಂದ ಎಂ,ನಾಗೇಶ್ ಪೊನ್ನೊಡಿ,ಅರುಣ್ ಕುಮಾರ್ ,ಪ್ರೇಮನಾಥ ಕೆ ,ರಾಜೇಶ್ ಸುವರ್ಣ ಹಾಗೂ ಪ್ರಥಮ ಉಪಾಧ್ಯಕ್ಷರಾದ ನಾರಾಯಣ ಪೂಜಾರಿ ಪಲ್ಲಿಕಂಡ, ಆರೋಗ್ಯ ನಿರ್ದೇಶಕ ಮಹೇಶ್ ಬೊಳ್ಳಾಯಿ, ವಿಧ್ಯಾನಿಧಿ ನಿರ್ದೇಶಕರಾದ ವಿಕ್ರಮ್ ಶಾಂತಿ , ಕಲೆ ಮತ್ತು ಸಾಹಿತ್ಯ ನಿರ್ದೆಶಕರಾದ ಲೋಹಿತ್, ಕೋಶಾಧಿಕಾರಿ ಗೀತಾ ಜಗದೀಶ್, ಸಮಾಜಸೇವಾ ನಿರ್ದೇಶಕರಾದ ಪುರುಷೋತ್ತಮ ಕಾಯರ್ಪಲ್ಕೆ ,ಸದಸ್ಯರಾದ ಪ್ರಶಾಂತ್ ಏರಮಲೆ, ಚಂದ್ರಶೇಖರ್ ಕಲ್ಯಾಣಾಗ್ರಹಾರ,ವಿಘ್ನೇಶ್ ಬೊಳ್ಳಾಯಿ, ಯತೀಶ್ ಬೊಳ್ಳಾಯಿ,ಹರೀಶ್ ಅಜೆಕಲಾ, ನಾಗೇಶ್ ಏಲಬೆ, ಜೈದೀಪ್ ಏಲಬೆ, ಹಸ್ತ್ ರಾಯಿ, ಸಾಜಲ್ ರಾಯಿ, ರಾಜೇಶ್ ಬಿ.ಸಿ ರೋಡ್, ಸುದೀಪ್ ರಾಯಿ, ಮತ್ತಿತರರು ಉಪಸ್ಥಿತರಿದ್ದರು,
ನಾರಾಯಣ ಗುರು ತತ್ವ ಪ್ರಚಾರ ಹಾಗೂ ಅನುಷ್ಠಾನ ನಿರ್ದೇಶಕರು ಪ್ರಜಿತ್ ಅಮೀನ್ ಏರಮಲೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು