ಕಾಸರಗೋಡು: ತಳಂಗರೆ ಮಾಲಿಕ್ ದೀನಾ ಮಸೀದಿಗೆ
ಹೋಗುವ ಕಮಾನಿನ ಬಳಿ ಅಬಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾಚ ರಣೆಯಲ್ಲಿ ಮಾದಕದ್ರವ್ಯವಾದ ೫ ಗ್ರಾಂ ಹ್ಯಾಶಿಶ್ ಪತ್ತೆಹಚ್ಚಿ ವಶಪಡಿಸಿಕೊಂಡಿದೆ.
ಅದನ್ನು ಕೈವಶವಿರಿಸಿಕೊಂಡಿದ್ದ ಆರೋಪದಂತೆ ತಳಂಗರೆ ಕುನ್ಸಿಲ್‌ನ ಅಬ್ದುಲ್ ರಿಯಾಸ್ (40) ಎಂಬಾತ ನನ್ನು ಅಬಕಾರಿ ತಂಡ ಬಂಧಿಸಿ ಎನ್‌ಡಿಪಿ ಎಸ್ ಕಾನೂನುಪ್ರಕಾರ ಕೇಸು ದಾಖಲಿ ಸಿಕೊಂಡಿದೆ. ಕಾಸರಗೋಡಿನ ಅಬಕಾರಿ ಸ್ಪೆಷಲ್ ಸ್ಟ್ಯಾಡ್‌ನ ಸರ್ಕಲ್ ಇನ್‌ಸ್ಪೆಕ್ಟರ್ ಪ್ರಶೋಬ್ ಕೆ.ಎಸ್ ನೇತೃತ್ವದಲ್ಲಿ ಅಸಿಸ್ಟೆಂಟ್ ಎಕ್ಸೆಸ್ ಇನ್‌ಸ್ಪೆಕ್ಟ (ಗ್ರೇಡ್)ಗಳಾದ ಪ್ರಮೋದ್ ಕುಮಾರ್, ಸುರೇಶ್ ಕೆ.ವಿ, ಗ್ರೇಡ್ ಪ್ರಿವೆಂಟಿವ್ ಆಫೀಸರ್ ನೌಶಾದ್, ಸಿವಿಲ್ ಎಕ್ಸೆಸ್ ಆಫೀಸ ರ್‌ಗಳಾದ ಸೋನು ಸೆಬಾಸ್ಟಿನ್ ಮತ್ತು ಅಶ್ವತಿ
ಎಂಬಿವರನ್ನೊಳಗೊಂಡ ಅಬಕಾರಿ ತಂಡ ಈ ಕಾರ್ಯಾಚರಣೆ
ನಡೆಸಿದೆ.