ನರೇಂದ್ರ ಮೋದಿ ಮೂರನೇ ಭಾರಿ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ: ಮಂಜೇಶ್ವರ ಮಂಡಲದ ವಿವಿಧ ಕಡೆಗಳಲ್ಲಿ ಬಿಜೆಪಿಯಿಂದ ವಿಜಯೋತ್ಸವ

Share with

ಮಂಜೇಶ್ವರ: ನರೇಂದ್ರ ಮೋದೀಜಿ ಯವರು ಮೂರನೇ ಭಾರಿಯೂ ಪ್ರಧಾನ ಮಂತ್ರಿಯಾಗಿ ಹಾಗೂ ರಾಜ್ಯದಲ್ಲಿ ಪ್ರಥಮ ಭಾರಿ ತಾವರೆಯನ್ನು ಅರಳಿಸಿದ ಸಿನಿಮಾ ನಟ ಸುರೇಶ್ ಗೋಪಿ ರವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ  ಹಿನ್ನೆಲೆಯಲ್ಲಿ ಬಿಜೆಪಿ ಮಂಜೇಶ್ವರ ಮಂಡಲದ ವಿವಿಧ ಕಡೆಗಳಲ್ಲಿ ಸಭೆಗಳು, ಸಿಡಿಮದ್ದು, ಸಿಹಿ ತಿಂಡಿ, ಡಿಜೆಯಲ್ಲಿ ಹಾಡುಗಳನ್ನು ಹಾಕಿ  ಭಾರೀ ಸಂಭ್ರಮದಿಂದ ವಿಜಯೋತ್ಸವವನ್ನು  ಆಚರಿಸಲಾಯಿತು. ಇದರಂತೆ  ಬಿಜೆಪಿ ಪೈವಳಿಕೆ ಪಂಚಾಯತ್ ಸಮಿತಿ ನೇತೃತ್ವದಲ್ಲಿ ಬಾಯಾರು ಪದವುನಲ್ಲಿ ನಡೇದ ಕಾರ್ಯಕ್ರಮದಲ್ಲಿ ಬಿಜೆಪಿ ನೇತಾರರಾದ ಮುರಳೀಧರ ಯಾದವ್, ಬಾಲಕೃಷ್ಣ, ಗಣೇಶ, ಕರ್ಷಕ ಮೋರ್ಚಾ  ನೇತಾರರಾದ  ಪ್ರವೀಣ್‌ಚಂದ್ರ ಬಲ್ಲಾಳ್, ಸದಾಶಿವ ಚೇರಾಲ್ ಮೊದಲಾದವರು ಉಪಸ್ಥಿತರಿದ್ದರು. ಮೋಹನ್ ಬಲ್ಲಾಳ್, ಶಂಕರ ಮಾಸ್ತರ್, ವೇಣು, ಆನಂದ ಮೊದಲಾದವರು ನೇತೃತ್ವ ನೀಡಿದರು. ಸುಬ್ರಹ್ಮಣ್ಯ ಆಟಿಕುಕ್ಕೆ ಸ್ವಾಗತಿಸಿ. ಸಂತೋಷ್ ವಂದಿಸಿದರು.


Share with

Leave a Reply

Your email address will not be published. Required fields are marked *