ಶಂಬೂರ್ ಶೌರ್ಯ ಘಟಕದ ವತಿಯಿಂದ ನರಿಕೊಂಬು ಗ್ರಾಮದ ಕೋದಂಡರಾಮ ದೇವಸ್ಥಾನ ನಾಟಿ ಬೀದಿ ಇಲ್ಲಿ ಗಿಡನಾಟಿ ಕಾರ್ಯಕ್ರಮ

Share with

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಬಿ ಸಿ ಟ್ರಸ್ಟ್ (ರಿ.)ಬಂಟ್ವಾಳ ಇದರ ಪಾಣೆ ಮಂಗಳೂರು ವಲಯದ ಶಂಬೂರ್ ಶೌರ್ಯ ಘಟಕದವತಿಯಿಂದ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಕೋದಂಡರಾಮ ದೇವಸ್ಥಾನ ನಾಟಿ ಬೀದಿ ಇಲ್ಲಿ ಗಿಡ ನಾಟಿ ಕಾರ್ಯಕ್ರಮ ಮಾಡಲಾಯಿತು. ದಕ್ಷಿಣ ಕನ್ನಡ ಸಹಕಾರಿ ಯೂನಿಯನ್ ಸಂಘ ದ ನಿರ್ದೇಶಕ ಪುರುಷೋತ್ತಮ್ ಸಾಲಿಯಾನ್ ಗಿಡ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶೌರ್ಯ ತಂಡದ ಸದಸ್ಯರು ಸಮಾಜ ಸೇವೆಯ ಜೊತೆಗೆ ತನ್ನ ಗ್ರಾಮ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಆಗುವ ವಿಪತ್ತಿನ ಸಂದರ್ಭ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತ ಸೇವೆ ಅಭಿನಂದಕದಾಯಕವಾಗಿದೆ ಎಂದರು. ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಬಾಲಕೃಷ್ಣ ಶೌರ್ಯ ತಂಡದ ಕಾರ್ಯಕ್ರಮದ ಉದ್ದೇಶ ಹಾಗೂ ಇದರಿಂದ ಆಗುವ ಜನಪರ ಕೆಲಸ ಹಾಗೂ ಊರಿನಲ್ಲಿ ಆಗುವ ಬದಲಾವಣೆ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ನರಿಕೊಂಬು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಮೋಹಿನಿ, ಸದಸ್ಯರಾದ ಕಿಶೋರ್ ಶೆಟ್ಟಿ, ಜನ ಜಾಗೃತಿ ಸದಸ್ಯರಾದ ಪುರುಷೋತ್ತಮನಾಟಿ, ಒಕ್ಕೂಟ ಅಧ್ಯಕ್ಷರ ಕೃಷ್ಣಪ್ಪ ನಾಯ್ಕ್, ದೇವಸ್ಥಾನದ ಅರ್ಚಕರಾದ ಸುಬ್ರಯ ಜೋಸಿ, ಲಕ್ಷ್ಮಿ,ಹಾಗೂ ಶೌರ್ಯಘಟಕದ ಸ್ವಯಂಸೇವಕರು, ಸಂಘದ ಸದಸ್ಯರುಉಪಸ್ಥಿತರಿದ್ದರು. ಶೌರ್ಯ ತಂಡದ ಸಂಯೋಜಕಿ ಲಕ್ಷ್ಮಿ ವಂದಿಸಿ, ಪಾಣೆಮಂಗಳೂರು ವಲಯ ಮೇಲ್ವಿಚಾರಕಿ ಅಮಿತಾ, ಕಾರ್ಯಕ್ರಮ ನಿರೂಪಿಸಿದರು


Share with

Leave a Reply

Your email address will not be published. Required fields are marked *