ಮಲಯಾಳಂ ಚಿತ್ರರಂಗದ ಹಿರಿಯ ನಟ, ನವರಸ ನಾಯಕ, ನಿರ್ದೇಶಕ ಶ್ರೀನಿವಾಸನ್ ಅಸ್ತಂಗತ

Share with

ಕೊಚ್ಚಿ: ಸಾಮಾನ್ಯ ಜನರ ಜೀವನವನ್ನು ಅಸಾಧಾರಣ ಪ್ರತಿಭೆಯಿಂದ ಚಿತ್ರಿಸಿದ್ದ ಚಿತ್ರಕಥೆಗಾರ, ನಟ ಮತ್ತು ನಿರ್ದೇಶಕ ಶ್ರೀನಿವಾಸನ್ (69) ನಿಧನರಾಗಿದ್ದಾರೆ. ಅನಾರೋಗ್ಯದ ಕಾರಣ ಉದಯಂಪೀರೂರಿನ ತಮ್ಮ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಶ್ರೀನಿವಾಸನ್‌ ಅವರನ್ನು ಇಂದು(ಡಿ.20) ಬೆಳಿಗ್ಗೆ ಡಯಾಲಿಸಿಸ್‌ಗೆ ಕರೆದೊಯ್ಯುವಾಗ ಅಸ್ವಸ್ಥಗೊಂಡು ತ್ರಿಪುನಿತುರ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಯಿತು. ಬೆಳಿಗ್ಗೆ 8.30 ಕ್ಕೆ ಆಸ್ಪತ್ರೆಯಲ್ಲಿ ನಿಧನರಾದರು.

ಅವರ ಮೃತದೇಹವನ್ನು ತಾಲ್ಲೂಕು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಮೃತರು ಪತ್ನಿ ವಿಮಲಾ. ಮಕ್ಕಳು ವಿನೀತ್ ಶ್ರೀನಿವಾಸನ್ (ನಿರ್ದೇಶಕ, ನಟ, ಚಿತ್ರಕಥೆಗಾರ, ಗಾಯಕ), ಧ್ಯಾನ್ ಶ್ರೀನಿವಾಸನ್ (ನಿರ್ದೇಶಕ, ನಟ). ಸೊಸೆಯಂದಿರು ಹಾಗೂ ಅಪಾರ ಚಿತ್ರಾಭಿಮಾನಿಗಳನ್ನು, ಬಂಧು ಬಳಗವನ್ನು ಅಗಲಿದ್ದಾರೆ.


Share with

Leave a Reply

Your email address will not be published. Required fields are marked *