
ಕುಂಜತ್ತೂರು: ತೂಮಿನಾಡು ಸಾರ್ವಜನಿಕ ಶ್ರೀ ಮಹಾಕಾಳಿ ಭಜನಾ ಮಂದಿರದಲ್ಲಿ 42ನೇ ವರ್ಷದ ನವರಾತ್ರಿ ನಾಡಹಬ್ಬ ನಾಳೆಯಿಂದ ಆರಂಭ ಗೊಂಡು 12ರ ತನಕ ವಿವಿಧ ಕಾಯಕ್ರಮಗಳೊಂದಿಗೆ ನಡೆಯಲಿದೆ. ಉತ್ಸವ ದಿನದಂದು ಬೆಳಿಗ್ಗೆ ದೀಪಾರಾಧನೆ, ಸಂಜೆ ಭಜನೆ, ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ವಿಶೇಷ ಸೇವೆಗಳು ನಡೆಯಲಿದೆ. 12ರಂದು ಬೆಳಿಗ್ಗೆ 7.30ಕ್ಕೆ ದೀಪಾರಾಧನೆ, 9.30ರಿಂದ ವಾಹನ ಪೂಜೆ, 11.30ರಿಂದ ಅಕ್ಷರಾಭ್ಯಾಸ, ಮಧ್ಯಾಹ್ನ 12.30ಕ್ಕೆ ಪುಸ್ತಕ ಪೂಜೆ ಮತ್ತು ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ 1ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ.





