ಐಲ ಕ್ಷೇತ್ರದಲ್ಲಿ   ನವರಾತ್ರಿ ಮಹೋತ್ಸವ ಅಕ್ಟೋಬರ್ 3ರಿಂದ 11ರ ತನಕ 12  ಆಯುಧ ಪೂಜೆ 13 ವಿಜಯದಶಮಿ

Share with


ಉಪ್ಪಳ: ಐಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ  ಅಕ್ಟೋಬರ್ 3ರಿಂದ 11ರ ತನಕ ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿಗಳವರ ನೇತೄತ್ವದಲ್ಲಿ ವಿವಿಧ ವೈಧಿಕ, ಧಾರ್ಮಿಕ ಹಾಗೂ ಸಾಂಸ್ಕöÈತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಉತ್ಸವದ ಸಂದರ್ಭದಲ್ಲಿ ಪ್ರತಿನಿತ್ಯ ನಡೆಯುವ ಕಾರ್ಯಕ್ರಮಗಳು: ಬೆಳಿಗ್ಗೆ 7ರಿಂದ ನಿತ್ಯ ಪೂಜೆ, ಹೂವಿನ ಪೂಜೆ, ಗಣಹೋಮ, ನವಕ ಕಲಶಾಭಿಷೇಕ, 10 ಗಂಟೆಯಿAದ ವಿವಿಧ ಗ್ರಾಮಸ್ಥರಿಂದ ಸಾಮೂಹಿಕ ಭಜನೆ, ಸರ್ವಮಂಗಲ ಮಾಂಗಲ್ಯೆ ಸ್ತುತಿ ಪಾರಾಯಣ, ಮಧ್ಯಾಹ್ನ 12.30ರಿಂದ ಹೂವಿನ ಪೂಜೆ, ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 5ರಿಂದ ವಿವಿಧ ತಂಡಗಳಿAದ ಭಜನೆ, 6.30ರಿಂದ ದೀಪಾರಾಧನೆ, ವಿವಿಧ ತಂಡಗಳಿoದ ನೃತ್ಯ ಭಜನೆ, 7.30ರಿಂದ ಹೂವಿನ ಪೂಜೆ, ಮಹಾಪೂಜೆ, ಭಜನೆ, ಸರ್ವಮಂಗಲ ಮಾಂಗಲ್ಯೆ ಸ್ತುತಿ ಪಾರಾಯಣ, ರಾತ್ರಿ 9ರಿಂದ ರಂಗಪೂಜೆ, ಪ್ರಸಾದ ವಿತರಣೆ, 4ರಂದು ಬೆಳಿಗ್ಗೆ ಸಾಮೂಹಿಕ ಚಂಡಿಕಾಯಾಗ,  12ರಂದು ಬೆಳಿಗ್ಗೆ 6ರಿಂದ ಆಯುಧ ಪೂಜೆ ಪ್ರಯುಕ್ತ ವಾಹನ ಪೂಜೆ, 13ರಂದು ಬೆಳಿಗ್ಗೆ 7ರಿಂದ ವಿಜಯದಶಮಿ ಪ್ರಯುಕ್ತ ವಿಧ್ಯಾರಂಭ ನಡೆಯಲಿದೆ. ಉತ್ಸವದ ಎಲ್ಲಾ ದಿನಗಳಲ್ಲಿ ಮಧ್ಯಾಹ್ನ 12.30ರಿಂದ ಹಾಗೂ ರಾತ್ರಿ 7ರಿಂದ 9ರ ತನಕ ವಿವಿಧ ಸಂಘ ಸಂಸ್ಥೆಗಳಿoದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.


Share with

Leave a Reply

Your email address will not be published. Required fields are marked *