
ಮಂಗಳೂರು : ನೆರೆಮನೆಯವರ ಜಗಳ ಅಪಘಾತಗೊಳಿಸಿ ಕೊಲೆ ಮಾಡುವ ಹಂತ ತಲುಪಿದ್ದು ಘಟನೆಯಿಂದ ಓರ್ವ ಪಾದಾಚಾರಿ ಮಹಿಳೆ ಗಾಯಗೊಂಡಿರುವ ಘಟನೆ ನಡೆದಿದೆ.
ನೆರೆಹೊರೆಯ ಮನೆಯವರಾದ ಸತೀಶ್ ಹಾಗೂ ಮುರಳಿ ಪ್ರಸಾದ್ ಎಂಬುವವರ ನಡುವೆ ಜಗಳ ನಡೆದಿದ್ದು ಮುರುಳಿ ಎಂಬವರ ಬೈಕ್‌ಗೆ ಸತೀಶ್ ತನ್ನ ಕಾರಿನಿಂದ ಅಪಘಾತಗೊಳಿಸಿ ಕೊಲೆ ಯತ್ನಕ್ಕೆ ಮುಂದಾಗಿರುವ ಘಟನೆ ಮಂಗಳೂರು ನಗರದ ಬಿಜೈ ಕಾಪಿಕಾಡ್‌ನಲ್ಲಿ ನಡೆದಿದೆ.
ಆದರೆ ಇಬ್ಬರ ಜಗಳದ ನಡುವೆ ಡಿಕ್ಕಿ ಪಡಿಸುವ ಸಮಯದಲ್ಲಿ ರಸ್ತೆಯಲ್ಲಿ ನಡೆದುಕೊಂಡು ಬಂದ ಮಹಿಳೆಯೊಬ್ಬರಿಗೆ ಕೂಡ ಡಿಕ್ಕಿ ಹೊಡೆದಿದ್ದು, ಮಹಿಳೆ ಗಂಭೀರ ಗಾಯಗೊಂಡಿದ್ದಾಳೆ.
ಇನ್ನೂ ಈ ಘಟನೆಯ ದೃಶ್ಯ ಮನೆಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆಯಲ್ಲಿ ಮುರುಳಿಪ್ರಸಾದ್ ಮತ್ತು ಪಾದಾಚಾರಿ ಮಹಿಳೆಗೆ ಗಂಭೀರ ಗಾಯವಾಗಿದೆ. ಮಂಗಳೂರಿನ ಉರ್ವಾ ಠಾಣೆಯಲ್ಲಿ ಸತೀಶ್ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.