ಮಂಗಲ್ಪಾಡಿ: ಪುಳಿಕುತ್ತಿ ಐಲ ಬ್ರಹ್ಮಶ್ರೀ ಮೊಗೇರ ಮಹಾಕಾಳಿ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ ಮಾ.27ರಿಂದ ಆರಂಭಗೊಂಡಿತು. ಮಾ.27ರಂದು ಬೆಳಿಗ್ಗೆ ಗಣಹೋಮ, ಮಧ್ಯಾಹ್ನದಿಂದ ಸಂಜೆ ತನಕ ಭಂಡಾರ ಮನೆಯಲ್ಲಿ ಶ್ರೀ ಗುಳಿಗ, ಶ್ರೀ ಕೊರತಿ ದೈವದ ಕೋಲ, ಸಂಜೆ ನವದುರ್ಗ ಕುಣಿತ ಭಜನಾ ಸಂಘ ಪುಳಿಕುತ್ತಿ ಇವರಿಂದ ಕುಣಿತ ಭಜನೆ, ಬಳಿಕ ಭಂಡಾರ ಆಗಮನ, ಧಾರ್ಮಿಕ ಸಭಾ ಕಾರ್ಯಕ್ರಮ, ರಾತ್ರಿ ಸ್ಥಳೀಯ ಮಕ್ಕಳಿಂದ ನೃತ್ಯ, ರಾತ್ರಿ ಶ್ರೀ ಕೊರಗ ತನಿಯ, ಅಣ್ಣಪ್ಪಪಂಜುರ್ಲಿ, ಕಲ್ಲುರ್ಟಿ ದೈವಗಳ ನೇಮೋತ್ಸವ, ಪ್ರಸಾದ ವಿತರಣೆ ನಡೆಯಿತು. ಮಾ.27ರ ತನಕ ನೇಮೋತ್ಸವ ನಡೆಯಲಿದೆ.