ಉಪ್ಪಳ: ಕುಂಬಳೆ ಆರಿಕ್ಕಾಡಿ ಪಾಡಾಂಗರೆ ಕ್ಷೇತ್ರಕ್ಕೆ ಸಂಬಂಧಿಸಿದ ದೇವಾಡಿಗ ಸಮುದಾಯದ ಮಧೂರು ಚೇನಕ್ಕೋಡು ಪಳ್ಳಂಗಳ ತರವಾಡಿನಲ್ಲಿ ಶ್ರೀ ಪಡಿಞರ್ ಚಾಮುಂಡಿ ದೈವದ ನೇಮೋತ್ಸವ ಎರಡು ದಿನಗಳ ಕಾಲ ನಡೆಯಿತು.



ಗೊನೆ ಮುಹೂರ್ತ, ಗಣಪತಿ ಹೋಮ, ಹರಿಸೇವೆ, ದೈವದ ಭಂಡಾರ ಆಗಮನ, ಕೊರತಿ ಅಮ್ಮನವರ ಕೋಲ, ಪಂಜುರ್ಲಿ ಕಲ್ಲುರ್ಟಿ ದೈವದ ನೇಮ, ಗುಳಿಗ ದೈವದ ಕೋಲ ಮೊದಲಾದ ಕಾರ್ಯಕ್ರಮ ನಡೆಯಿತು. ನೇಮೋತ್ಸವದಲ್ಲಿ ಹಲವಾರು ಮಂದಿ ಭಕ್ತರು ಪಾಲ್ಗೊಂಡರು.




