ಹಾಲಿವುಡ್ ಫೇಮಸ್ ಸ್ಟುಡಿಯೋನ 74 ಲಕ್ಷ ಕೋಟಿ ರೂಪಾಯಿಗೆ ಖರೀದಿಸಿದ ನೆಟ್ಫ್ಲಿಕ್ಸ್

Share with

ನೆಟ್ಫ್ಲಿಕ್ಸ್ ತನ್ನದೇ ಅನೇಕ ಒರಿಜಿನಲ್ ಸೀರಿಸ್ಗಳನ್ನು ನಿರ್ಮಾಣ ಮಾಡಿದೆ. ಅಲ್ಲದೆ, ದೇಶ-ವಿದೇಶಗಳಿಂದ ಹಲವು ಸಿನಿಮಾ ಹಾಗೂ ಸೀರಿಸ್ಗಳನ್ನು ಖರೀದಿ ಮಾಡಿ ಪ್ರಸಾರ ಮಾಡುತ್ತಿದೆ. ಈಗ ನೆಟ್ಫ್ಲಿಕ್ಸ್ ಒಂದು ದೊಡ್ಡ ನಿರ್ಧಾರಕ್ಕೆ ಬಂದಿದೆ. ಹಾಲಿವುಡ್ನ ಫೇಮಸ್ ಸ್ಟುಡಿಯೋ ವಾರ್ನರ್ ಬ್ರೋಸ್ ಫಿಲ್ಮ್ ಮತ್ತು ಟಿವಿ ಸ್ಟುಡಿಯೋನ ಬರೋಬ್ಬರಿ 74 ಲಕ್ಷ ಕೋಟಿ ರೂಪಾಯಿ ಕೊಟ್ಟು ನೆಟ್ಫ್ಲಿಕ್ಸ್ ಖರೀದಿ ಮಾಡಿದೆ. ಈ ಮೂಲಕ ನೆಟ್ಫ್ಲಿಕ್ಸ್ ಲೈಬ್ರರಿ ಹಿರಿದಾಗಿದೆ.

ಹ್ಯಾರಿ ಪಾಟರ್, ಸೂಪರ್ ಮ್ಯಾನ್, ಬ್ಯಾಟ್ಮ್ಯಾನ್, ಗೇಮ್ ಆಫ್ ಥ್ರೋನ್ಸ್, ಫ್ರೆಂಡ್ಸ್ ರೀತಿಯ ಪ್ರಾಜೆಕ್ಟ್ಗಳನ್ನು ‘ವಾರ್ನರ್ ಬ್ರೋಸ್ ನಿರ್ಮಾಣ ಮಾಡಿದೆ. ಇವೆಲ್ಲವೂ ಈಗ ನೆಟ್ಫ್ಲಿಕ್ಸ್ ತೆಕ್ಕೆಗೆ ಸಿಕ್ಕಿವೆ. ವಾರ್ನರ್ ಬ್ರೋಸ್ ಡಿಸ್ಕವರಿ ಕಂಪನಿಯ ಮೌಲ್ಯ 82 ಬಿಲಿಯನ್ ಡಾಲರ್. ಇದರಲ್ಲಿ 72 ಬಿಲಿಯನ್ ಡಾಲರ್ ಇದರ ಷೇರುಗಳಿಂದಲೇ ಬರುತ್ತಿದೆ. 2026 ಮಾರ್ಚ್ ವೇಳೆಗೆ ಈ ಡೀಲ್ ಅಂತಿಮಗೊಳ್ಳುವ ನಿರೀಕ್ಷೆ ಇದೆ.

ವಾರ್ನರ್ ಬ್ರೋಸ್ ಬಳಿ ಸಾಕಷ್ಟು ಸಿನಿಮಾ ಹಾಗೂ ಸೀರಿಸ್ಗಳಿವೆ. ಇವುಗಳ ಮೇಲೆ ನೆಟ್ಫ್ಲಿಕ್ಸ್ ಕಣ್ಣಿಟ್ಟಿತ್ತು. ಇದನ್ನು ಈಗ ನೆಟ್ಫ್ಲಿಕ್ಸ್ ಖರೀದಿ ಮಾಡುವ ಮೂಲಕ ತನ್ನ ಲೈಬ್ರರಿ ದೊಡ್ಡದಾಗಿಸಿದೆ. ಇದರಿಂದ ನೆಟ್ಫ್ಲಿಕ್ಸ್ ಸಬ್ಸ್ಕ್ರೈಬರ್ಗಳಿಗೆ ಹೆಚ್ಚು ಸರಣಿ ಹಾಗೂ ಸಿನಿಮಾಗಳು ವೀಕ್ಷಣೆಗೆ ಲಭ್ಯವಾಗಲಿದೆ.

ಇನ್ನು ದೊಡ್ಡ ಸ್ಟುಡಿಯೋ ಒಂದು ಇವರ ಕೈ ಸೇರಿರುವುದರಿಂದ ಮುಂದಿನ ದಿನಗಳಲ್ಲಿ ದೊಡ್ಡ ದೊಡ್ಡ ಸಿನಿಮಾಗಳನ್ನು ನಿರ್ಮಾಣ ಮಾಡಲು, ಸರಣಿಗಳನ್ನು ನಿರ್ಮಿಸಲು ಈ ಒಪ್ಪಂದ ಸಹಕಾರಿ ಆಗಲಿದೆ. ಇದು ನೆಟ್ಫ್ಲಿಕ್ಸ್ ಬಳಕೆದಾರರ ಖುಷಿ ಹೆಚ್ಚಿದೆ.

ಕಳೆದ ಕೆಲವು ದಿನಗಳಿಂದ ವಾರ್ನರ್ ಬ್ರೋಸ್ ಡಿಸ್ಕವರಿ ಮಾರಾಟದ ಬಗ್ಗೆ ಚರ್ಚೆ ನಡೆದಿತ್ತು. Paramount ಸಂಸ್ಥೆ ವಾರ್ನರ್ ಬ್ರೋಸ್ ಖರೀದಿ ಮಾಡಲಿದೆ ಎಂದು ಹೇಳಲಾಗಿತ್ತು. ಆದರೆ, ನೆಟ್ಫ್ಲಿಕ್ಸ್ ಇವರನ್ನು ಹಿಂದಿಕ್ಕಿ ಡೀಲ್ನ ತನ್ನದಾಗಿಸಿಕೊಂಡಿದೆ.

ಹಾಟ್ಸ್ಟಾರ್ಗೆ ಹೊಡೆತ?
ಸದ್ಯ ಜಿಯೋ ಹಾಟ್ಸ್ಟಾರ್ ಅಲ್ಲಿ ಹಲವು ಎಚ್ಬಿಒ ಶೋಗಳು ವೀಕ್ಷಣೆಗೆ ಲಭ್ಯವಿದೆ. ಇವೆಲ್ಲವೂ ಈಗ ನೆಟ್ಫ್ಲಿಕ್ಸ್ ಪಾಲಾಗಿರುವುದರಿಂದ ಹಾಟ್ಸ್ಟಾರ್ಗೆ ಹೊಡೆತ ಉಂಟಾಗಲಿದೆ.


Share with

Leave a Reply

Your email address will not be published. Required fields are marked *