ಖಾಸಗಿ ಕಾಲೇಜಿನಲ್ಲಿ ಖ್ಯಾತ ನಟಿಯರ ಗ್ಲಾಮರಸ್ ನೃತ್ಯ –ಮಿತಿ ಮೀರಿದ ವರ್ತನೆ ಎಂದ ನೆಟ್ಟಿಗರು

Share with

ಚೆನ್ನೈ: ಖಾಸಗಿ ಕಾಲೇಜಿನಲ್ಲಿ ಖ್ಯಾತ ನಟಿಯರ ಗ್ಲಾಮರಸ್ ನೃತ್ಯ ವಿವಾದಕ್ಕೆ ಕಾರಣವಾಗಿದ್ದು, ಚರ್ಚೆ ಹುಟ್ಟುಹಾಕಿದೆ.

ಇತ್ತೀಚೆಗೆ ಕಾಲೇಜು ಕಾರ್ಯಕ್ರಮವೊಂದರಲ್ಲಿ ನಟಿ ಸಯೇಷಾ ಸೈಗಲ್, ಶ್ರಿಯಾ ಶರಣ್ ಮತ್ತು ಸಾನ್ವಿ ಮೇಘನಾ ಅವರ ನೃತ್ಯ ಪ್ರದರ್ಶನಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿವೆ.

ವೈರಲ್ ವಿಡಿಯೋ ಹಿಂದಿನ ಸತ್ಯ..

ಆರಂಭದಲ್ಲಿ ವೈರಲ್ ಆಗಿದ್ದ ಈ ನೃತ್ಯದ ತುಣುಕುಗಳನ್ನು ನೋಡಿದ ನೆಟ್ಟಿಗರು, ಇದು ಯಾವುದೋ ಪ್ರಶಸ್ತಿ ಪ್ರದಾನ ಸಮಾರಂಭ ಅಥವಾ ದೊಡ್ಡ ಮಟ್ಟದ ಮ್ಯೂಸಿಕಲ್ ಕಾರ್ಯಕ್ರಮ ಇರಬಹುದು ಎಂದು ಭಾವಿಸಿದ್ದರು. ಆದರೆ, ಇದು ಒಂದು ಖಾಸಗಿ ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮದ ದೃಶ್ಯಗಳು ಎಂಬ ವಿಷಯ ತಿಳಿಯುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.

ವಿಮರ್ಶಕರ ವಾದವೇನು?:

ಶಿಕ್ಷಣ ಸಂಸ್ಥೆಗಳು ತಮ್ಮದೇ ಆದ ಘನತೆ ಮತ್ತು ಮೌಲ್ಯಗಳನ್ನು ಹೊಂದಿರಬೇಕು ಎಂದು ಹಲವರು ವಾದಿಸುತ್ತಿದ್ದಾರೆ. ಕಾಲೇಜು ಕಾರ್ಯಕ್ರಮಗಳಲ್ಲಿ ಇಂತಹ ಗ್ಲಾಮರಸ್ ನೃತ್ಯ ಪ್ರದರ್ಶನಗಳ ಅಗತ್ಯವೇನಿದೆ? ಎಂಬುದು ಟೀಕಾಕಾರರ ಪ್ರಶ್ನೆ.

ಈ ರೀತಿ ಸೆಲೆಬ್ರಿಟಿಗಳನ್ನು ಕರೆದು ಕಾರ್ಯಕ್ರಮಗಳನ್ನು ಮಾಡಿಸುವುದು ಆಕರ್ಷಣೆಯ ತಂತ್ರ ಒಳ್ಳೆಯದಲ್ಲ ಎಂದು ವಾದಿಸಿದ್ದಾರೆ.

ಕಾಲೇಜುಗಳು ಪ್ರಚಾರಕ್ಕಾಗಿ ಮತ್ತು ವಿದ್ಯಾರ್ಥಿಗಳನ್ನು ಸೆಳೆಯಲು ಸಿನಿಮಾ ತಾರೆಯರನ್ನು ಆಹ್ವಾನಿಸುತ್ತಿವೆ. ಸೆಲೆಬ್ರಿಟಿಗಳನ್ನು ಕರೆಯುವುದರಲ್ಲಿ ತಪ್ಪಿಲ್ಲದಿದ್ದರೂ, ಮನರಂಜನೆಯ ಹೆಸರಿನಲ್ಲಿ ನಡೆಯುವ ‘ಬೋಲ್ಡ್’ ನೃತ್ಯಗಳು ಶೈಕ್ಷಣಿಕ ಪರಿಸರಕ್ಕೆ ಒಪ್ಪುವಂತದ್ದಲ್ಲ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.

ಕೇರಳ ಕಾಲೇಜಿನ ಉದಾಹರಣೆ ಕೊಟ್ಟ ನೆಟ್ಟಿಗರು: ಇದೇ ಸಂದರ್ಭದಲ್ಲಿ ನೆಟ್ಟಿಗರು ಕೇರಳದ ಕಾಲೇಜೊಂದರ ಉದಾಹರಣೆ ನೀಡಿದ್ದಾರೆ. ಆ ಕಾಲೇಜು ಸುನಿತಾ ವಿಲಿಯಮ್ಸ್ ಅವರಂತಹ ಸಾಧಕರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿತ್ತು. ಕಾಲೇಜುಗಳು ಗ್ಲಾಮರ್ ಬೆನ್ನತ್ತುವ ಬದಲು ಇಂತಹ ಸ್ಫೂರ್ತಿದಾಯಕ ವ್ಯಕ್ತಿಗಳನ್ನು ಪರಿಚಯಿಸಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.

ಬೆಂಬಲಕ್ಕೆ ನಿಂತವರು ಹೇಳುವುದೇನು?:

ಮತ್ತೊಂದೆಡೆ, ಈ ಕಾರ್ಯಕ್ರಮಗಳನ್ನು ಸಮರ್ಥಿಸಿಕೊಳ್ಳುವವರೂ ಇದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಇರುವುದೇ ಮನರಂಜನೆಗಾಗಿ ಮತ್ತು ವಿದ್ಯಾರ್ಥಿಗಳ ಉತ್ಸಾಹ ಹೆಚ್ಚಿಸಲು. ಇದರಲ್ಲಿ ತಪ್ಪೇನಿದೆ? ಎಂದು ಅವರು ಪ್ರಶ್ನಿಸುತ್ತಿದ್ದಾರೆ.


Share with

Leave a Reply

Your email address will not be published. Required fields are marked *