ಮಂಜೇಶ್ವರ: ನವ ಕೇರಳ ಕ್ರಿಯಾ ಯೋಜನೆ ಅಂಗವಾಗಿ ಹರಿತ ಕೇರಳ ಮಿಷನ್ ಹಾಗೂ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ವಿವಿಧ ಜಲ ಸಂರಕ್ಷಣೆಗಳ ಚಟುವಟಿಕೆಗಳು ನ.1ರಂದು ಆರಂಭವಾಯಿತು.
ಬರಗಾಲವನ್ನು ಪ್ರತಿರೋಧಿಸುವ ಎಂಬ ಘೋಷಣೆಯೊಂದಿಗೆ ನಡೆದ ಕಾರ್ಯಕ್ರಮ ವಿವಿಧ ಪಂಚಾಯತ್ ಮಟ್ಟದಲ್ಲಿ ನಡೆಯಿತು. ಮೀಂಜ ಪಂಚಾಯತ್ ನಲ್ಲಿ ಸಾರ್ವಜನಿಕ ಜಲಾಶಯ ಶುಚೀಕರಣ ಪಂಚಾಯತ್ ಅಧ್ಯಕ್ಷೆ ಸುಂದರಿ ಆರ್ ಶೆಟ್ಟಿ ಉದ್ಘಾಟಿಸಿದರು. ಜ್ಯೋತಿ ರೈ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಾಬು.ಸಿ, ರುಖಿಯ ಸಿದ್ದೀಕ್, ಪಂಚಾಯತ್ ಕಾರ್ಯದರ್ಶಿ ಸುರೇಶ್ ಮತ್ತಿತರರು ಮಾತನಾಡಿದರು. ಅಜಿತ್ ಸ್ವಾಗತಿಸಿದರು. ನಾರಾಯಣ ಬೇಕೂರು ವಂದಿಸಿದರು.
ಮಂಜೇಶ್ವರ ಪೀರಾರಮೂಲೆ ಒಳಚರಂಡಿ ಪುನರುಜ್ಜೀವನ ಪಂಚಾಯತ್ ಉಪಾಧ್ಯಕ್ಷ ಮುಹಮ್ಮದ್ ಸಿದ್ದೀಕ್ ಉದ್ಘಾಟಿಸಿದರು. ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಎಂ ರಾಧಾ ಅಧ್ಯಕ್ಷತೆ ವಹಿಸಿದ್ದರು. ಪಂಚಾಯತ್ ಕಾರ್ಯದರ್ಶಿ ಸುಧೀರ್ ಎ, ಸಹ ಕಾರ್ಯದರ್ಶಿ ಭವನಾ ಮಾತನಾಡಿದರು. ಅಜಿತ್ ಕುಮಾರ್ ಸ್ವಾಗತಿಸಿದರು. ಆಕಾಶ್ ವಂದಿಸಿದರು. ಪುತ್ತಿಗೆ ಪಂಚಾಯತಿನ ಕೊಳ್ಳಕಂದ ಉರ್ಮಿ ನದಿಯ ಪುನರುಜ್ಜೀವನ ಪಂಚಾಯತ್ ಅಧ್ಯಕ್ಷ ಡಿ.ಸುಬ್ಬಣ್ಣ ಆಳ್ವ ಉದ್ಘಾಟಿಸಿದರು. ಪಂಚಾಯತ್ ಉಪಾಧ್ಯಕ್ಷೆ ಜಯಂತಿ ಅಧ್ಯಕ್ಷತೆ ವಹಿಸಿದ್ದರು. ಪ್ರಜ್ವಲ್ ಕುಮಾರ್ ಸ್ವಾಗತಿಸಿದರು. ಮಾಯ ವಂದಿಸಿದರು.
ಎಣ್ಮಕಜೆ ಪಂಚಾಯತ್ ನ ಬಜಕುಡ್ಲು- ಎಣ್ಮಕಜೆ ನದಿ ಪುನರುಜ್ಜೀವನ ಪಂಚಾಯತ್ ಅಧ್ಯಕ್ಷ ಸೋಮಶೇಖರ ಜೇ.ಎಸ್ ಉದ್ಘಾಟಿಸಿದರು.ವಾರ್ಡ್ ಸದಸ್ಯೆ ಉಷಾ ಕುಮಾರಿ ಅಧ್ಯಕ್ಷತೆ ವಹಿಸಿದ್ದರು. ಗಿರೀಶ್ ಸ್ವಾಗತಿಸಿದರು. ನಾವಸ್ ಮಾರ್ಥ್ಯ ವಂದಿಸಿದರು.
ವರ್ಕಾಡಿ ಪಂಚಾಯತ್ ನ ಉರ್ನಿ – ತುಪ್ಪೆ ಒಳ ಚರಂಡಿಯ ಪುನರುಜ್ಜೀವನ ಪಂಚಾಯತ್ ಅಧ್ಯಕ್ಷೆ ಭಾರತಿ ಎಸ್ ಉದ್ಘಾಟಿಸಿದರು. ಉಪಾಧ್ಯಕ್ಷ ಸಿದ್ದೀಕ್ ಪಾಡಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಅನಿಲ್ ಕುಮಾರ್ ಮಾತನಾಡಿದರು. ಅನೀಶ್ ಅಹ್ಮದ್ ಸ್ವಾಗತಿಸಿದರು. ಜಿಲ್ಲೆಯಾದ್ಯಂತ ಎಲ್ಲಾ ಪಂಚಾಯತ್ ಗಳಲ್ಲಿ ಉದ್ಘಾಟನೆಯಾಗಿದೆ. ಡಿಸೆಂಬರ್ 5 ರ ಒಳಗೆ ಜಲಾಶಯ ಪುನರುಜ್ಜೀವನ ಗೊಳಿಸಬೇಕೆಂದು ಉದ್ದೇಶವಾಗಿದೆ.