ಮುಳ್ಳಿನ ಪೊದೆಯಲ್ಲಿ ನವಜಾತ ಶಿಶು ಪತ್ತೆ..!

Share with

ಕೊಪ್ಪಳ: ತಾಲೂಕಿನ ಹುಲಿಗಿ ಗ್ರಾಮದ ಹೊರವಲಯದ ಮುಳ್ಳಿನ ಪೊದೆಯಲ್ಲಿ ಮಂಗಳವಾರ (ಡಿ.30) ನವಜಾತ ಶಿಶು ಪತ್ತೆಯಾಗಿದೆ.

ಜನ್ಮತಾಳಿದ ಹೆಣ್ಣು ನವಜಾತ ಶಿಶುವನ್ನು ಮದುವೆಗೆ ಮುನ್ನ ಗರ್ಭಧರಿಸಿದ ಯುವತಿ ಕಡೆಯವರು ಎಸೆದು ಹೋಗಿರುವ ಶಂಕೆಯಿದೆ.

ಶಿಶು ಮುಳ್ಳಿನ ಪೋದೆಯಲ್ಲಿ ಅಳುವುದನ್ನು ಗಮನಿಸಿದ ಸ್ಥಳೀಯರು, ಶ್ರೀ ಹುಲಿಗೆಮ್ಮ ದೇವಸ್ಥಾನದ ಆಡಳಿತ ಮಂಡಳಿ ಗಮನಕ್ಕೆ ತಂದಿದ್ದಾರೆ. ಅವರು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ರಕ್ಷಣಾ ಘಟಕದ ಸಿಬ್ಬಂದಿ ಶಿಶುವನ್ನು ರಕ್ಷಣೆ ಮಾಡಿ, ಜಿಲ್ಲಾಸ್ಪತ್ರೆಗೆ ಕರೆ ತಂದಿದ್ದು, ಮಗು ಆರೋಗ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *