ಪುತ್ತೂರು:ಪುತ್ತೂರು ಸುದ್ದಿ ಬಿಡುಗಡೆ ಕಚೇರಿ ವ್ಯವಸ್ಥಾಪಕರಾಗಿದ್ದ ಚಂದ್ರಶೇಖರ್ ಗೌಡ ಉಮಿಗದ್ದೆ (58ವ.)ಅವರು ಅಲ್ಪಕಾಲದ ಅಸೌಖ್ಯದಿಂದ ಆ.6ರಂದು ರಾತ್ರಿ ಸ್ವಗೃಹ ಆರ್ಯಾಪು ಗ್ರಾಮದ ಮರಿಕೆಯಲ್ಲಿ ನಿಧನರಾದರು.
ಕಳೆದ ಸುಮಾರು 34 ವರ್ಷಗಳಿಂದ ಇವರು ಸುದ್ದಿ ಬಿಡುಗಡೆ ಪತ್ರಿಕಾ ಕಚೇರಿಯಲ್ಲಿ ಓರ್ವ ಪ್ರಾಮಾಣಿಕ ನೌಕರನಾಗಿ ಕೆಲಸ ಮಾಡಿಕೊಂಡಿದ್ದು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದಾಗಿ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದರು.
ಮೃತರು ಪತ್ನಿ ಶೀಲಾವತಿ ಹಾಗೂ ಇನ್ಫೋಸಿಸ್ ಉದ್ಯೋಗಿಯಾಗಿರುವ ಪುತ್ರ ರೋಹಿತ್ ಅವರನ್ನು ಅಗಲಿದ್ದಾರೆ.