“ಘೋಸ್ಟ್” ಸಿನಿಮಾದ ಹಾಡುಗಳಿಗೆ ಅರ್ಜುನ್ ಜನ್ಯ ಜೊತೆ ಸಹಾಯಕರಾಗಿ ಹಿನ್ನೆಲೆ ಸಂಗೀತದ ಕೆಲಸ ನಿರ್ವಹಿಸಿದ ನಿಶಾನ್ ರೈ ಮಠಂತಬೆಟ್ಟು

Share with

ಹಲವು ಭಾಷೆಗಳಲ್ಲಿ ತಯಾರಾಗಿ ಇತ್ತೀಚೆಗೆ ತೆರೆಕಂಡ ಡಾ| ಶಿವರಾಜ್ ಕುಮಾರ್ ಅಭಿನಯದ “ಘೋಸ್ಟ್” ಪ್ಯಾನ್ ಇಂಡಿಯಾ ಚಲನಚಿತ್ರದ ಥೀಮ್ ಸಾಂಗ್ ಹಾಡಿ ಗಳಿಸಿದ ಜನಪ್ರಿಯತೆಯೊಂದಿಗೆ ಇದೀಗ ಸಿನಿಮಾದ ಕನ್ನಡ ಮತ್ತು ಹಿಂದಿ ಭಾಷೆಗಳ ಹಾಡುಗಳಿಗೆ ಸಾಹಿತ್ಯ ಬರೆದು, ಅರ್ಜುನ್ ಜನ್ಯ ಜೊತೆ ಸಹಾಯಕರಾಗಿ ಸಿನಿಮಾದ ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು ನಿರ್ವಹಿಸಿ, ಹಾಡುಗಳನ್ನು ಹಾಡುವುದರೊಂದಿಗೆ ಸ್ಯಾಂಡಲ್ ವುಡ್ ಸಂಗೀತ ಲೋಕದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದು ಬೆಳೆಯುತ್ತಿರುವ ಪುತ್ತೂರು ಮೂಲದ ಮಂಗಳೂರಿನ ಕಲಾವಿದ ನಿಶಾನ್ ರೈ ಮಠಂತಬೆಟ್ಟು.

ಪುತ್ತೂರು ಮೂಲದ ಮಂಗಳೂರಿನ ಕಲಾವಿದ ನಿಶಾನ್ ರೈ ಮಠಂತಬೆಟ್ಟು.

ಸಂದೇಶ್ ನಾಗರಾಜ್ ನಿರ್ಮಾಣದಲ್ಲಿ, ಚಂದನವನದ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಂಗೀತ ನಿರ್ದೇಶನದಲ್ಲಿ, ಎಂ ಜಿ ಶ್ರೀನಿವಾಸ್ ನಿರ್ದೇಶನದಲ್ಲಿ ಕರುನಾಡ ಚಕ್ರವರ್ತಿ ಡಾ| ಶಿವರಾಜ್ ಕುಮಾರ್ ನಾಯಕ ನಟನಾಗಿ ಅಭಿನಯಿಸಿರುವ “ಘೋಸ್ಟ್” ಜೈಲನ್ನೇ ಹೈಜಾಕ್ ಮಾಡುವ ಕಥೆಯನ್ನು ಹೊಂದಿರುವ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು ಈಗಾಗಲೇ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಕರುನಾಡ ಚಕ್ರವರ್ತಿ ಡಾ| ಶಿವರಾಜ್ ಕುಮಾರ್ ಜೊತೆ 
 ನಿಶಾನ್ ರೈ ಮಠಂತಬೆಟ್ಟು.
ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಜೊತೆ ನಿಶಾನ್ ರೈ.

ಕನ್ನಡ ಚಲನಚಿತ್ರ ರಂಗದಲ್ಲಿ ಈಗಾಗಲೇ ಹಿನ್ನೆಲೆ ಗಾಯಕನಾಗಿ ಉತ್ತಮ ಹೆಸರುಗಳಿಸಿಕೊಂಡು ಸಂಗೀತ ನಿರ್ದೇಶಕನಾಗುವ ನಿಟ್ಟಿನಲ್ಲಿ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಜೊತೆಯಲ್ಲಿ ಸಿಂಗರ್, ಲಿರಿಕಿಸ್ಟ್, ಪ್ರೋಗ್ರಾಮರ್ ಆಗಿ ಸದ್ಯ ನಿಶಾನ್ ರೈ ಯವರು ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. “ಕೌಸಲ್ಯ ಸುಪ್ರಜ ರಾಮ” ಚಿತ್ರದ ‘ಶಿವಾನಿ’ ಹಾಡು ಹಾಗೂ ನಿಶಾನ್ ಧ್ವನಿಯಲ್ಲಿ ಮೂಡಿ ಬಂದಿರುವ ಇನ್ನಿತರ ಹಲವಾರು ಚಿತ್ರಗಳ ಹಾಡುಗಳು ಈಗಾಗಲೇ ತುಂಬಾ ಜನಪ್ರಿಯವಾಗಿವೆ.

ಸುಮಾರು ಒಂದೂವರೆ ವರ್ಷಗಳಿಂದೀಚೆಗೆ ಅರ್ಜುನ್ ಜನ್ಯ ಜೊತೆಗಿದ್ದು ಅವರ ಸಂಗೀತ ನಿರ್ದೇಶನದಲ್ಲಿ ನಿಶಾನ್ ಕನ್ನಡ ಚಿತ್ರರಂಗದ ಖ್ಯಾತ ನಟರಾದ ಕರುನಾಡ ಚಕ್ರವರ್ತಿ ಡಾ| ಶಿವರಾಜ್ ಕುಮಾರ್, ಗೋಲ್ಡನ್ ಸ್ಟಾರ್ ಗಣೇಶ್, ಡಾರ್ಲಿಂಗ್ ಕೃಷ್ಣ, ಧೀರೇನ್ ರಾಮ್ ಕುಮಾರ್, ರಾಕ್‌ಸ್ಟಾರ್‌ ರೂಪೇಶ್ ಶೆಟ್ಟಿ ಮುಂತಾದವರು ನಟಿಸಿರುವ “ಘೋಸ್ಟ್, ಕೌಸಲ್ಯ ಸುಪ್ರಜ ರಾಮ, ಬಾನ ದಾರಿಯಲ್ಲಿ, ಲವ್ ಬರ್ಡ್ಸ್, ದಿಲ್ ಪಸಂದ್, ರೇಸರ್, ಅರ್ಧಂಬರ್ಧ ಪ್ರೇಮ ಕಥೆ, ಶಿವ 143, ಮುಂತಾದ ಕನ್ನಡ ಹಾಗೂ ಕಟಪಾಡಿ ಕಟ್ಟಪ್ಪ, ಗಮ್ಜಾಲ್” ತುಳು ಚಲನಚಿತ್ರಗಳ ಸುಮಾರು 20ಕ್ಕಿಂತಲೂ ಅಧಿಕ ಗೀತೆಗಳು ಹಾಗೂ ಹಲವಾರು ಆಲ್ಬಂ ಸಾಂಗ್ ಗಳನ್ನು ಹಾಡಿ ಚಂದನವನದ ಉತ್ತಮ ಹಿನ್ನೆಲೆ ಗಾಯಕರಲ್ಲಿ ತಾನೂ ಒಬ್ಬರಾಗಿ ಈಗಾಗಲೇ ಗುರುತಿಸಿಕೊಂಡಿದ್ದಾರೆ.

ಕರ್ನಾಟಕದ ಪ್ರತಿಷ್ಠಿತ ಮೈಸೂರು ದಸರಾ, ಹಂಪಿ ಉತ್ಸವ, ಹೊಯ್ಸಳ ಉತ್ಸವ, ಲಕ್ಕುಂಡಿ ಉತ್ಸವ, ಶಿರಸಿ ಉತ್ಸವಗಳಲ್ಲಿ, ಹಾಗೂ ದೆಹಲಿ, ಮುಂಬಯಿ, ಗುಜರಾತ್, ಕೇರಳ ಸೇರಿದಂತೆ ಈಗಾಗಲೇ ಸಾವಿರಾರು ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿರುತ್ತಾರೆ.

ಕೀ|ಶೇ ಚಿದಾನಂದ ಕಾಮತ್ ರ ಬಾರಿಸು ಕನ್ನಡ ಡಿಂಡಿಮ ತಂಡದ ಹಾಡುಗಾರನಾಗಿ ಚಿಕ್ಕಂದಿನಲ್ಲೇ ಗುರುತಿಸಿ ಕೊಂಡಿದ್ದ ನಿಶಾನ್, ಮಾಜಿ ಶಾಸಕಿ ಶ್ರೀಮತಿ ಶಕುಂತಳಾ ಶೆಟ್ಟಿಯವರು ಭಾಗವಹಿಸಿದ್ದ ಪುತ್ತೂರಿನ ಯುವ ಬಂಟರು ಆಯೋಜಿಸಿದ್ದ ಅದ್ದೂರಿ ಕಾರ್ಯಕ್ರಮ ಒಂದರಲ್ಲಿ ಅವರು ಹಾಡೊದಕ್ಕೆ ಅವಕಾಶ ಮಾಡಿಕೊಟ್ಟಾಗ ವೇದಿಕೆಯಲ್ಲಿ ತಾನು ನೀಡಿದ ಅದ್ಭುತ ಪ್ರದರ್ಶನದಿಂದಾಗಿ ಮುಂದೆ ಶಕುಂತಳಾ ಶೆಟ್ಟಿಯವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ “ಕತಾರ್” ದೇಶದಲ್ಲಿ ನಡೆದ ‘ಬಂಟ್ಸ್ ಕತಾರ್’ನ ಕಾರ್ಯಕ್ರಮ ಒಂದರಲ್ಲಿ ಕೂಡ ಸಂಗೀತ ರಸಮಂಜರಿ ಕಾರ್ಯಕ್ರಮ ನೀಡಲು ಆಹ್ವಾನಿಸಲ್ಪಟ್ಟು, ನಂತರದ ದಿನಗಳಲ್ಲಿ ನಿಶಾನ್ ರೈಯವರು ಬಹರೀನ್, ಅಬುಧಾಬಿ, ದುಬೈ, ಕುವೈಟ್‌ ಮುಂತಾದ ವಿದೇಶಗಳ ಪ್ರತಿಷ್ಠಿತ ವೇದಿಕೆಗಳಲ್ಲಿಯೂ ಸಂಗೀತ ಕಾರ್ಯಕ್ರಮ ನೀಡಿದ್ದು, “ಕೊರೊನಾ” ಸಂದರ್ಭದಲ್ಲಿ ಯುಎಸ್ಎ ನಾರ್ತ್ ಕ್ಯಾರೋಲಿನದ ಬಂಟ್ಸ್ ಕಾರ್ಯಕ್ರಮಕ್ಕೆ ವರ್ಚುವಲ್ ಆಗಿ ಸಂಗೀತ ಕಾರ್ಯಕ್ರಮ ನೀಡಿ, ದೇಶ ವಿದೇಶಗಳಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಜನಪ್ರಿಯ ಕಲಾವಿದರಾಗಿ ಬೆಳೆದು ನಿಂತಿದ್ದಾರೆ.

TV ರಿಯಾಲಿಟಿ ಶೋ ಗಳಲ್ಲಿಯೂ ಕೂಡ ಸ್ಪರ್ಧಿಯಾಗಿ ಭಾಗವಹಿಸಿ ಜನಪ್ರಿಯತೆಯನ್ನು ಗಳಿಸಿಕೊಂಡಿರುವ ನಿಶಾನ್ ರೈಯವರು ಸದ್ಯ ಅರ್ಜುನ್ ಜನ್ಯ ತಂಡದ ಲೈವ್ ಶೋ ಗಳಲ್ಲಿ ಮತ್ತು ಟಿವಿ ಶೋಗಳಲ್ಲಿ ಕೂಡಾ ಹಾಡುಗಾರನಾಗಿ ಅವರೊಂದಿಗೆ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ.

ಶೂಟಿಂಗ್ ಮುಗಿಸಿ ಈಗಾಗಲೇ ಪ್ರದರ್ಶನಕ್ಕೆ ಸಿದ್ಧಗೊಂಡಿರುವ ಚಲನಚಿತ್ರ ಒಂದಕ್ಕೆ ಸಂಗೀತ ನಿರ್ದೇಶನವನ್ನೂ ಸ್ವತಃ ನಿಶಾನ್ ಮಾಡಿದ್ದು, ಅರ್ಧಂಬರ್ಧ ಪ್ರೇಮ ಕಥೆ ಸಿನಿಮಾದ ಪೂರ್ತಿ ಬ್ಯಾಕ್ಗ್ರೌಂಡ್ ಸ್ಕೋರಿಂಗ್ ಕೆಲಸವನ್ನು ಕೂಡ ನಿರ್ವಹಿಸಿರುತ್ತಾರೆ

ಈ ಎಲ್ಲ ತನ್ನ ಸಾಧನಗಳ ಜೊತೆಗೆ ಎಂಬಿಎ ವ್ಯಾಸಂಗವನ್ನು ಮಾಡುತ್ತಿರುವ ಇವರು ಬಾಲ್ಯೋಟ್ಟು ಗುತ್ತು ಕರುಣಾಕರ ರೈ ಮತ್ತು ನಿರತ.ಕೆ ರೈ ಮಠಂತಬೆಟ್ಟು ಇವರ ಸುಪುತ್ರ, ನಿರೀಕ್ಷಾ ರೈಯವರ ಸಹೋದರ.


Share with

Leave a Reply

Your email address will not be published. Required fields are marked *