ನೋ ಮೋರ್‌ ಬ್ಯಾಕ್‌ ಬೆಂಚರ್ಸ್‌; ಸಿನಿಮಾದಿಂದ ಪ್ರೇರಣೆ ಪಡೆದು ಹೊಸ ಆಸನ ವ್ಯವಸ್ಥೆಯನ್ನು ಅಳವಡಿಸಿಕೊಂಡ ಕೇರಳದ ಶಾಲೆಗಳು

Share with

ಕೇರಳ, ಜುಲೈ 12: ಶಾಲೆಗಳಲ್ಲಿ ಲಾಸ್ಟ್‌ ಬೆಂಚ್‌ನಲ್ಲಿ  (Last Bench Students) ಕೂರುವಂತಹ ವಿದ್ಯಾರ್ಥಿಗಳಿಗೆ ನಾವು ಲಾಸ್ಟ್‌ ಬೆಂಚ್‌ ಸ್ಟೂಡೆಂಟ್ಸ್‌ ಅಂತ ಕರೆಸಿಕೊಳ್ಳುವುದಕ್ಕೆ ಅದೇನೋ ಹೆಮ್ಮೆ. ಅದೇ ರೀತಿ ಶಿಕ್ಷಕರಿಗೆ ಈ ಲಾಸ್ಟ್‌ ಬೆಂಚ್‌ನಲ್ಲಿ ಕುಳಿತ ತರ್ಲೆ ವಿದ್ಯಾರ್ಥಿಗಳನ್ನು ನಿಭಾಯಿಸುವುದೇ ದೊಡ್ಡ ಟಾಸ್ಕ್.‌ ಈ ಲಾಸ್ಟ್‌ ಬೆಂಚ್‌ನಲ್ಲಿ ಕುಳಿತ ವಿದ್ಯಾರ್ಥಿಗಳು ಟೀಚರ್‌ ಪಾಠ ಮಾಡುವಾಗಲೂ ಅತ್ತ ಗಮನ ಕೊಡದೆ ಏನೇನೋ ತರ್ಲೆ ಕಿತಾಪತಿಗಳನ್ನು ಮಾಡುತ್ತಿರುತ್ತಾರೆ. ಇದರಿಂದ ಪಾಠದತ್ತ ಗಮನ ಕೂಡ ಕೊಡುವುದಿಲ್ಲ. ಜೊತೆಗೆ ಇಂತಹ ಸೀಟಿಂಗ್‌ ಅರೇಂಜ್‌ಮೆಂಟ್‌ ಲಾಸ್ಟ್‌ ಬೆಂಚ್‌ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವೆ ಅಂತರ ಸಹ ಹೆಚ್ಚಾಗುತ್ತದೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವಿನ ಈ ಅಂತರವನ್ನು ಕಡಿಮೆ ಮಾಡುವ ಸಲುವಾಗಿ ಇದೀಗ ಕೇರಳ ಕೆಲವು ಶಾಲೆಗಳು ಹೊಸದಾಗಿ (Kerala schools adopt new seating arrangement) ಅರ್ಧ ವೃತ್ತಾಕಾರದ ಆಸನ ವ್ಯವಸ್ಥೆಯನ್ನು ಪರಿಚಯಿಸಿವೆ.


ಹೊಸ ಸೀಟಿಂಗ್‌ ಅರೇಂಜ್‌ಮೆಂಟ್‌ ಅಳವಡಿಸಿಕೊಂಡ ಕೇರಳದ ಶಾಲೆಗಳು:
2024 ರಲ್ಲಿ ಬಿಡುಗಡೆಗೊಂಡ ವಿನೇಶ್‌ ವಿಶ್ವನಾಥ್‌ ಅವರ ನಿರ್ದೇಶನದ ಮಲಯಾಳಂ ಚಲನಚಿತ್ರವಾದ  ʼಸ್ಥಾನಾರ್ಥಿ ಶ್ರೀಕುಟ್ಟನ್‌ʼ  ಸಿನಿಮಾದಿಂದ ಪ್ರೇರಣೆಗೊಂಡು ಶಾಲೆಗಳು ಈ ಹೊಸ ವ್ಯವಸ್ಥೆಯನ್ನು ಪರಿಚಯಿಸಿದ್ದು, ವಿದ್ಯಾರ್ಥಿಗಳಿಗೆ ಕಟ್ಟುವ ಬ್ಯಾಕ್‌ ಬೆಂಚರ್ಚ್‌ ಎಂಬ ಹಣೆಪಟ್ಟಿಯನ್ನು ತೊಡೆದು ಹಾಕುವುದು ಇದರ ಮುಖ್ಯ ಉದ್ದೇಶವಾಗಿದೆ.

ʼUʼ ಶೇಪ್‌ ಅಂದರೆ ಈ ಅರ್ಧವೃತ್ತಾಕಾರದ ಆಸನ ವ್ಯವಸ್ಥೆಯು ವಿದ್ಯಾರ್ಥಿಗಳಲ್ಲಿ ತರಗತಿಯಲ್ಲಿ ಸಮಾನ ಒಳಗೊಳ್ಳುವಿಕೆ, ಸಮಾನ ಭಾಗವಹಿಸುವಿಕೆ ಮತ್ತು ಎಲ್ಲಾ ಚಟುವಟಿಕೆಗಳಲ್ಲೂ ಉತ್ತಮ ತೊಡಗಿಕೊಳ್ಳುವಿಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಕೇರಳದ ಶಿಕ್ಷಣಾಧಿಕಾರಿಗಳು ಮತ್ತು ಶಾಲಾ ನಿರ್ವಹಣಾ ಸಮಿತಿಗಳು ಈ ಉಪಕ್ರಮವನ್ನು ಅನುಮೋದಿಸಿವೆ. ಪ್ರಸ್ತುತ ಈ ವ್ಯವಸ್ಥೆಯನ್ನು ಕೊಲ್ಲಂ, ಕಣ್ಣೂರು, ತ್ರಿಶೂರ್‌, ಪಾಲಕ್ಕಾಡ್‌ ಸೇರಿದಂತೆ ಕೇರಳದ ಕೆಲವು ಜಿಲ್ಲೆಗಳಲ್ಲಿರುವ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಜಾರಿಗೆ ತರಲಾಗಿದೆ.


Share with

Leave a Reply

Your email address will not be published. Required fields are marked *