ಮೂರು ತಿಂಗಳಾದರೂ ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಸಂಬಳವಾಗದಿರುವ ಕುರಿತು ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.
ಸರ್ಕಾರ ಪಠ್ಯವನ್ನು ತೆಗೆಯುವಲ್ಲಿ ತೋರಿದ ಉತ್ಸಾಹ ಮತ್ತು ಕಾಳಜಿಯನ್ನು ಶಾಲೆಗಳು, ಮಕ್ಕಳು ಹಾಗೂ ಶಿಕ್ಷಕರ ಮೇಲೆ ತೋರುತ್ತಿಲ್ಲ. ಆಗಸ್ಟ್ ತಿಂಗಳು ಮುಗಿಯುತ್ತಾ ಬಂದರೂ ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಸಂಬಳವೇ ಹಾಕಿಲ್ಲ. ಸಚಿವ ಮಧು ಬಂಗಾರಪ್ಪ ಅವರೇ ನಿಮ್ಮ ಎಟಿಎಂ ಸರ್ಕಾರದ ವರ್ಗಾವಣೆ ದಂಧೆ ಮುಗಿದಿದ್ದರೆ. ಕೊಂಚ ಈ ಕಡೆ ಗಮನಹರಿಸಿ ಎಂದು ಟೀಕಿಸಿದೆ.