ಕಾಂಗ್ರೆಸ್ ಹಿರಿಯ ನಾಯಕ ಆರ್‌ವಿ ದೇಶಪಾಂಡೆ ‘ಸಿಎಂ ಹೇಳಿಕೆ’ ಸಂಚಲನ ಸೃಷ್ಟಿಸಿರುವಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದ್ದಾರೆ.
ಜನರ ಆಶೀರ್ವಾದ ಇರುವವರೆಗೂ ನನ್ನನ್ನು ಯಾರಿಂದಲೂ ಅಲ್ಲಾಡಿಸಲಾಗದು ಎಂದು ಹೇಳಿದ್ದಾರೆ. ಬಡವರ ಪರ ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆ ಎಂದ ಅವರು ಮುಂದೆಯೂ ನಿಮ್ಮ ಆಶೀರ್ವಾದ ಇರಲಿ. ನಿಮ್ಮ ಪರ ಇನ್ನಷ್ಟು ಕೆಲಸ ಮಾಡಿ ತೋರಿಸುತ್ತೇನೆ ಎಂದು ಹೇಳುವ ಮೂಲಕ ವಿರೋಧಿಗಳಿಗೆ ತಿರುಗೇಟು ನೀಡಿದ್ದಾರೆ.