ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ದರ್ಬಾರ್ ಜೋರಾಗಿದೆ. ವೀಕ್ಷಕರಿಗೆ ಗಿಲ್ಲಿ ಸಖತ್ ಎಷ್ಟವಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಗಿಲ್ಲಿ ಟ್ರೆಂಡ್ ಸೃಷ್ಟಿಯಾಗಿದೆ.

ಈ ವಾರ ಬಿಗ್ ಬಾಸ್ ಮನೆಗೆ ಸೀಸನ್ 11ರ ಸ್ಪರ್ಧಿಗಳಾದ ತ್ರಿವಿಕ್ರಂ, ಮೋಕ್ಷಿತಾ, ರಜತ್, ಚೈತ್ರಾ ಕುಂದಾಪುರ ಹಾಗೂ ಉಗ್ರಂ ಮಂಜು ಬಂದಿದ್ದರು. ಮನೆಗೆ ಬರುತ್ತಿದ್ದಂತೆಯೇ ಗಿಲ್ಲಿ ನಟನನ್ನು ಟಾರ್ಗೆಟ್ ಮಾಡಿದ್ದರು. ಗಿಲ್ಲಿಯನ್ನ ಅಮಾನವೀಯವಾಗಿ ಕಾಡಿದರು.
ಅತಿಥಿಗಳ ಮೊಂಡಾಟಕ್ಕೆ ಗಿಲ್ಲಿ ಜಗ್ಗಲಿಲ್ಲ, ಕುಗ್ಗಲಿಲ್ಲ. ತಮ್ಮದೇ ಶೈಲಿಯಲ್ಲಿ ಕೌಂಟರ್ಗೆ ಪ್ರತಿ ಕೌಂಟರ್ ಕೊಟ್ಟು ಅತಿಥಿಗಳಿಗೆ ಯಾಕಾದ್ರೂ ಬಂದ್ವಪ್ಪ ಅನ್ನೋವಷ್ಟು ಮಾಡಿದರು. ಗಿಲ್ಲಿಯವರ ರಿಯಾಕ್ಷನ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗ್ತಿವೆ.




