ಕಲ್ಲಂಗಡಿ ಹಣ್ಣು ಮಾತ್ರವಲ್ಲ, ಬೀಜವೂ ಆರೋಗ್ಯಕ್ಕೆ ಲಾಭಕಾರಿ!

Share with

ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಬೇಕಾದರೆ ತಿನ್ನುವ ಮೊದಲ ಹಣ್ಣೇ ಕಲ್ಲಂಗಡಿ ಹಣ್ಣು. ಇದು ದೇಹವನ್ನು ನಿರ್ಜಲೀಕರಣದಿಂದ ಕಾಪಾಡುವುದು ಮಾತ್ರವಲ್ಲದೆ, ಇದರಲ್ಲಿ ಇರುವ ಹಲವಾರು ಬಗೆ ಪೋಷಕಾಂಶಗಳು ದೇಹಕ್ಕೆ ಸಿಗುವುದು. ಆದರೆ ಇದರ ಬೀಜಗಳಲ್ಲಿ ಕೂಡ ಹಲವಾರು ಬಗೆ ಔಷಧೀಯ ಗುಣಗಳು ಇವೆ ಎಂದು ಹೇಳಲಾಗಿದೆ.

ಕಲ್ಲಂಗಡಿ ಬೀಜವು ತುಂಬಾ ಸಣ್ಣದಾಗಿದ್ದರೂ ಅದರಲ್ಲಿ ಹಲವಾರು ಬಗೆಯ ಪೋಷಕಾಂಶಗಳು ಇವೆ. ಇದರಲ್ಲಿ ಕಬ್ಬಿಣಾಂಶ, ಫಾಲಟೆ ಮತ್ತು ನಿಯಾಸಿನ್ ಅಂಶವು ಇದ್ದು, ಇದು ಆರೋಗ್ಯಕ್ಕೆ ಒಳ್ಳೆಯದು. ಕೆಲವರು ಇದರ ಬೀಜದಿಂದ ಬೆಣ್ಣೆ, ಹಿಟ್ಟು ತಯಾರು ಮಾಡುವರು ಹಾಗೂ ಇದನ್ನು ಹುರಿದುಕೊಂಡು ಸೇವನೆ ಮಾಡಬಹುದು. ಆದರೆ ಇದನ್ನು ಅತಿಯಾಗಿ ಸೇವನೆ ಮಾಡಿದರೆ ಆಗ ಜೀರ್ಣಕ್ರಿಯೆ ಸಮಸ್ಯೆ ಇರುವವರಲ್ಲಿ ಮಲಬದ್ಧತೆ ಕಾಣಿಸಬಹುದು.

ಕಲ್ಲಂಗಡಿ ಬೀಜದಲ್ಲಿ ಮೆಗ್ನಿಶಿಯಂ ಅಂಶವು ಒಳ್ಳೆಯ ಪ್ರಮಾಣದಲ್ಲಿದೆ ಮತ್ತು ಇದು ದೇಹದ ಕಾರ್ಯವನ್ನು ಉತ್ತಮವಾಗಿಡುವುದು. ಲೈಕೊಪೆನೆ ಎನ್ನುವ ಆ್ಯಂಟಿಆಕ್ಸಿಡೆಂಟ್ ಅಂಶವು ಇದರಲ್ಲಿ ಇರುವ ಕಾರಣದಿಂದಾಗಿ ಇದು ಹೃದಯದ ಆರೋಗ್ಯ ಕಾಪಾಡುವುದು. ಈ ಪೋಷಕಾಂಶಗಳು ಹಣ್ಣಿಗೆ ಬಣ್ಣ ನೀಡುವುದು ಹಾಗೂ ಹಲವಾರು ಆರೋಗ್ಯ ಲಾಭಗಳು ಇದರಲ್ಲಿದ್ದು, ಹೃದಯರಕ್ತನಾಳಕ್ಕೆ ಸಹಕಾರಿ ಮತ್ತು ಕ್ಯಾನ್ಸರ್ ತಡೆಯುವುದು.

ಕಲ್ಲಂಗಡಿ ಬೀಜಗಳನ್ನು ಸೇವನೆ ಮಾಡುವುದು ತುಂಬಾ ಸುರಕ್ಷಿತವಾದರೂ ಅದನ್ನು ಅತಿಯಾಗಿ ಸೇವಿಸಬಾರದು. ಇದು ಜೀರ್ಣಕ್ರಿಯೆಗೆ ಸಮಸ್ಯೆಯಾಗಬಹುದು. ಇದರಲ್ಲಿ ಅಧಿಕ ಪ್ರಮಾಣದ ಕರಗದ ನಾರಿನಾಂಶವು ಇದ್ದು, ಇದು ಜೀರ್ಣಕ್ರಿಯೆ ನಿಧಾನವಾಗಿಸಿ ಸಮಸ್ಯೆ ಉಂಟು ಮಾಡಬಹುದು. ಮೊಳಕೆ ಭರಿಸಿದ ಅಥವಾ ಬೇಯಿಸಿದ ಬೀಜಗಳು ಸರಿಯಾಗಿ ಜೀರ್ಣವಾಗುವುದು ಮತ್ತು ಆರೋಗ್ಯಕಾರಿ ಪೋಷಕಾಂಶಗಳನ್ನು ಹೀರಿಕೊಳ್ಳುವುದು.


Share with

Leave a Reply

Your email address will not be published. Required fields are marked *