ಎನ್.ಪಿ.ಸಿ.ಐ ಲಿಂಕ್: ತಹಶೀಲ್ದಾರ್ ಸೂಚನೆ

Share with

ವಿವಿಧ ಪಿಂಚಣಿಗಳನ್ನು ಆಧಾರ್ ಆಧಾರಿತ ನೇರ ಹಣ ಸಂದಾಯ ಯೋಜನೆಯಾಗಿ ತರಲು ತೀರ್ಮಾನ.

ಬಂಟ್ವಾಳ: ಸಾಮಾಜಿಕ ಭದ್ರತಾ ಯೋಜನೆಯಡಿ ಬರುವ ವಿವಿಧ ಪಿಂಚಣಿಗಳನ್ನು ಆಧಾರ್ ಆಧಾರಿತ ನೇರ ಹಣ ಸಂದಾಯ ಯೋಜನೆಯಾಗಿ ತರಲು ತೀರ್ಮಾನಿಸಿದ್ದು, ಯೋಜನೆಗಳನ್ನು ಕಾರ್ಯಗತಗೊಳಿಸಲು ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳ ಎನ್.ಪಿ.ಸಿ.ಐ (ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ ಆಫ್ ಇಂಡಿಯಾ) ಲಿಂಕ್ ಮಾಡಬೇಕಾಗುತ್ತದೆ. ಇಲ್ಲವಾದಲ್ಲಿ ಪಿಂಚಣಿ ಸಂಬಂಧಿತ ಹಣ ಬ್ಯಾಂಕ್ ಖಾತೆಗೆ ಜಮೆಯಾಗುವುದಿಲ್ಲ ಎಂದು ಬಂಟ್ವಾಳ ತಹಶೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾಮಾಜಿಕ ಭದ್ರತಾ ಯೋಜನೆಯಡಿ ಬರುವ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳ ಪೈಕಿ ಎನ್.ಪಿ.ಸಿ.ಐ ಪೋರ್ಟಲ್ ನಲ್ಲಿ ಹಾಗೂ ಪಿ.ಕೆ.ವೈ.ಸಿ ನಲ್ಲಿ ಮ್ಯಾಪಿಂಗ್ ಮಾಡದಿರುವ ಪಿಂಚಣಿದಾರರು ಆಧಾರ್ ಹಾಗೂ ಮೊಬೈಲ್ ನಂಬರ್, ಬ್ಯಾಂಕ್/ಅಂಚೆ ಖಾತೆಯೊಂದಿಗೆ ಸಂಬಂಧಪಟ್ಟ ಬ್ಯಾಂಕ್ /ಅಂಚೆ ಕಚೇರಿಗೆ ತೆರಳಿ ಸೆ.30ರೊಳಗೆ ಎನ್.ಪಿ.ಸಿ.ಐ.ಗೆ ಲಿಂಕ್ ಮಾಡಿಸಲು ಕೋರಿದೆ. ಬಾಕಿ ಇರುವ ಪಿಂಚಣಿದಾರರ ವಿವರವನ್ನು ತಮ್ಮ ಗ್ರಾಮದ ಗ್ರಾಮ ಆಡಳಿತ ಅಧಿಕಾರಿ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು ಎಂದು ತಹಶೀಲ್ದಾರ್ ಎಸ್.ಬಿ.ಕೂಡಲಗಿ ಅವರು ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *