ಬಂಟ್ವಾಳ: ಭೂಮಿಕಾ ಜ್ಞಾನವಿಕಾಸ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಮೇಳ ಕಾರ್ಯಕ್ರಮ

Share with

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ ) ಬಂಟ್ವಳ ತಾಲೂಕಿನ ಪುಂಜಾಲಕಟ್ಟೆ ವಲಯದ ಉಳಿ ಕಾರ್ಯಕ್ಷೇತ್ರದ ಭೂಮಿಕಾ ಜ್ಞಾನವಿಕಾಸ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಮೇಳ ಕಾರ್ಯಕ್ರಮ ಜರಗಿತು.

ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಬಾಲಕೃಷ್ಣ ಕಾರ್ಯಕ್ರಮ ಉದ್ಘಾಟಿಸಿ ಮಹಿಳೆಯರನ್ನು ಸಮಾಜದ ಮುಖ್ಯ ವಾಹಿನಿಗೆ ಕರೆತಂದು ಸ್ವಾವಲಂಬಿಗಳಾಗಿ ಮಾಡುವ ಉದ್ದೇಶದಿಂದಲೇ ಮಹಿಳಾ ಜ್ಞಾನವಿಕಾಸ ಕೇಂದ್ರಗಳ ರಚನೆಯಾಗಿದೆ. ಎಂದರು. ಕಾರ್ಯಕ್ರಮ ಅಧ್ಯಕ್ಷಥೆಯನ್ನು ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ಚಿದಾನಂದ ರೈ ವಹಿಸಿದ್ದರು.

ಮಹಿಳಾ ಸಾಂತ್ವನ ಕೇಂದ್ರದ ಕೌನ್ಸಿಲರ್ ವಿದ್ಯಾ ರವರು ಪೌಷ್ಟಿಕ ಆಹಾರ ಸೇವನೆಯಿಂದ ಆಗುವ ಉಪಯೋಗಗಳು ಹಾಗೂ ಅದರ ಅನುಷ್ಠಾನಗಳ ಬಗ್ಗೆ ಹಾಗೂ ಮಕ್ಕಳಿಗೆ ಯಾವ ರೀತಿ ಪೌಸ್ಟಿಕ ಆಹಾರ ನೀಡಬೇಕು ಎಂಬುದರ ಬಗ್ಗೆ ಮಾಹಿತಿ ಮಾರ್ಗದರ್ಶನವನ್ನು ನೀಡಿದರು.
ಭಜನಾ ಪರಿಷತ್ತಿನ ವಲಯ ಅಧ್ಯಕ್ಷರ ರೋಹಿನಾಥ ಗೌಡ ಮನೆ ಮನೆಯಲ್ಲಿ ಭಜನೆ ಮಾಡಿ ನಮ್ಮ ಸಂಸ್ಕ್ರತಿಯನ್ನು ಕಾಪಾಡಿಕೊಳ್ಳುವ ಬಗ್ಗೆ ಮಾಹಿತಿ ನೀಡಿದರು.

ಭೂಮಿಕೆ ಜ್ಞಾನ ವಿಕಾಸ ಸದಸ್ಯೆ ಶಾರದಾ ರವರು ಅನಿಸಿಕೆ ಯನ್ನು ವೆಕ್ತ ಪಡಿಸಿದರು.

ವಲಯದ ಮೇಲ್ವಿಚಾರಕಿ ಸವಿತಾ, ಸಮನ್ವಯಧಿಕಾರಿ ಶ್ರುತಿ,
ಸೇವಾಪ್ರತಿನಿಧಿಗಳಾದ ಉಷಾ, ಸುಧಾ ಉಪಸ್ಥಿತರಿದ್ದರು.

ಸುಲೋಚನಾ ಸ್ವಾಗತಿಸಿ, ಸೇವಾಪ್ರತಿನಿಧಿ ಶೇಖರ್ ವಂದಿಸಿ,ಪ್ರೇಮ ಕಾರ್ಯಕ್ರಮ ನಿರೂಪಿಸಿದರು.


Share with